Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ
ಈ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗುತ್ತಾ ಬಂದಿದೆ. ಹೀಗಾಗಿ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿತ್ತು. ಇಂದೂ ಬೆಲೆ ಏರಿಕೆಯಾಗಿಲ್ಲ. ಬದಲಿಗೆ ಯಥಾಸ್ಥಿತಿಯಲ್ಲಿದೆ. ನಿನ್ನೆ ಹೊಸ ಅಡಿಕೆ ಬೆಲೆ 475 ರೂ.ಗಳಾಗಿತ್ತು. ಇಂದೂ ಅದೇ ಬೆಲೆ ಮುಂದುವರಿದಿದೆ. ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.
ಹೊಸ ಪಟೋರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ನಿನ್ನೆಯದ್ದೇ ಬೆಲೆಯಿದೆ.. ಇಂದು ಹೊಸ ಪಟೋರ ದರ 365 ರೂ.ಗಳಷ್ಟಿದೆ. ಹಳೆ ಫಟೋರ ದರ 365 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 255 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ ಮಾತ್ರ 5 ರೂ. ಇಳಿಕೆಯಾಗಿದ್ದು ಇಂದು. ಇಂದೂ ತಲಾ 310 ರೂ.ಆಗಿದೆ.
ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಇಂದು ಮತ್ತೆ 5 ರೂ. ಕುಸಿತವಾಗಿದೆ. ಇಂದು 655 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಲೆ ನಿನ್ನೆ ಏರಿಕೆಯಾಗಿ ಬರೋಬ್ಬರಿ 255 ರೂ. ಗೆ ತಲುಪಿತ್ತು. ಇಂದೂ ಅದೇ ಬೆಲೆಯಿದೆ.