ಬೆಂಗಳೂರು: ಕಳೆದ ವಾರ ಕೊನೆಯಲ್ಲಿ ಏರಿಕೆಯಾಗಿದ್ದ ಅಡಿಕೆ ಬೆಲೆ ಈಗ ನಿಂತ ನೀರಾಗಿದೆ. ಮೊನ್ನೆಯಿಂದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಳೆ ಕಡಿಮೆಯಾಗಿದ್ದರೂ ಬೆಲೆ ಏರಿಕೆಯಾಗುತ್ತಿದೆ ಎಂಬ ನೆಮ್ಮದಿ ಬೆಳೆಗಾರರಲ್ಲಿತ್ತು. ಆದರೆ ಈಗ ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಡಿಕೆ ಬೆಲೆ ಏರಿಕೆಯಾಗದೇ ಇದ್ದರೂ ಯಥಾಸ್ಥಿತಿಯಲ್ಲಿದ್ದೇ ಇದೆ. ಆದರೆ ಇಳಿಕೆಯಂತೂ ಆಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಹೊಸ ಅಡಿಕೆಗೆ ಇಂದೂ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ. ಅಡಿಕೆ ಬೆಲೆ ಮೊನ್ನೆಯಿಂದ ಇದೇ ರೀತಿ ಮುಂದುವರಿದಿದೆ.
ಹೊಸ ಫಟೋರ ದರ 345 ರೂ.ಗಳಷ್ಟೇ ಇದೆ. ಹಳೆ ಫಟೋರ ದರ 355 ರೂ. ಗಳಷ್ಟಿದೆ. ಹೊಸ ಉಳ್ಳಿ ದರ ಏರಿಕೆಯಾಗಿ ಗರಿಷ್ಠ 215 ರೂ., ಹಳೆ ಉಳ್ಳಿ ದರ 230 ಗಳಷ್ಟಾಗಿದೆ. ಹೊಸ ಕೋಕ ದರ 290 ರೂ., ಹಳೇ ಕೋಕ 300 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಮೊನ್ನೆ ಕಾಳುಮೆಣಸು ದರ ಏರಿಕೆಯಾಗಿತ್ತು. ಆದರೆ ಕೆಲವು ದಿನಗಳಿಂದ ಕಾಳುಮೆಣಸು ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ಕಾಳುಮೆಣಸು ಗರಿಷ್ಠ ಬೆಲೆ 705 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.