ಬೆಂಗಳೂರು: ತನ್ನ ಗ್ರಾಹಕರಿಗಾಗಿ ಬಿಎಸ್ಎನ್ ಎಲ್ ಆಕರ್ಷಕ ಪ್ರೀಪೇಯ್ಡ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ಒಂದು ವರ್ಷ ಅವಧಿಯ ವ್ಯಾಲಿಡಿಟಿಯ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಇದರ ಜತೆಗೆ ದಿನಕ್ಕೆ 100 ಎಸ್ಎಂಎಸ್ ಉಚಿತ.
ಸದ್ಯಕ್ಕೆ ಈ ಯೋಜನೆ ಚೆನ್ನೈ ಟೆಲಿಕಾಂ ವಲಯಕ್ಕೆ ಮಾತ್ರ ನೀಡಲಾಗಿದೆ. ಒಟ್ಟು 730 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಹಾಗೂ ಎಸ್ ಎಂ ಎಸ್ ಸಿಗಲಿದೆ.
ವರ್ಷಕ್ಕೆ 36,500 ಎಸ್ ಎಂ ಎಸ್ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ಬೆಲೆ 1999 ರೂಪಾಯಿ. ಈ ಪ್ಲಾನ್ ಜೂನ್ 22 ರಿಂದ ಸೆಪ್ಟೆಂಬರ್ 22 ರವರೆಗೆ ರೀಚಾರ್ಜ್ ಮಾಡಲು ಲಭ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ