ಧರ್ಮಸ್ಥಳ ವಿವಾದಕ್ಕೆ ಬಿಜೆಪಿ, ಆರ್ ಎಸ್ಎಸ್ ಕಾರಣ ಎಂದ ಬಿಕೆ ಹರಿಪ್ರಸಾದ್
ನವದೆಹಲಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಧರ್ಮಸ್ಥಳ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆಲ್ಲಾ ಬಿಜೆಪಿಯ ಒಳಜಗಳವೇ ಕಾರಣ ಎಂದು ಹೇಳಿದ್ದಾರೆ. ಧರ್ಮಸ್ಥಳ ವಿವಾದಕ್ಕೂ ಬಿಜೆಪಿ ಒಳಜಗಳಕ್ಕೂ ಸಂಬಂಧವೇನು ಎಂದು ಅವರು ಹೇಳಿದ್ದಾರೆ.
ಸುನಿಲ್ ಕುಮಾರ್ ಮತ್ತು ನಳೀನ್ ಕುಮಾರ್ ಕಟೀಲ್ ಭಾಷಣದ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ಬಿಜೆಪಿಯ ಒಳಜಗಳ ಮತ್ತು ಆರ್ ಎಸ್ಎಸ್ ನಾಯಕರ ತಿಕ್ಕಾಟವೇ ಕಾರಣ ಎಂದಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ನದ್ದು ತಪ್ಪಿಲ್ಲ ಎಂದಿದ್ದಾರೆ.
ಬಿಎಲ್ ಸಂತೋಷ್ ಮತ್ತು ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ನಡುವಿನ ಶೀತಲ ಸಮರದಿಂದಲೇ ಧರ್ಮಸ್ಥಳದಲ್ಲಿ ಇಷ್ಟೆಲ್ಲಾ ಆಗಿದೆ. ಇದಕ್ಕೆ ಬಿಜೆಪಿಯವರೇ ನೇರ ಹೊಣೆ ಎಂದಿದ್ದಾರೆ.