ಬ್ಯಾಂಕ್‍ ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಲಿವೆ ಎಂಬುದು ಫೇಕ್ ನ್ಯೂಸ್ - ಆರ್.​ಬಿ.ಐ ಸ್ಪಷ್ಟನೆ

ಸೋಮವಾರ, 22 ಏಪ್ರಿಲ್ 2019 (08:34 IST)
ನವದೆಹಲಿ : ಇನ್ನುಮುಂದೆ ಬ್ಯಾಂಕ್ ಗಳಿಗೆ ಪ್ರತಿ ಶನಿವಾರ ಕೂಡ ರಜೆ ಇರುವುದರಿಂದ ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಲಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಸಾಮಾನ್ಯವಾಗಿ ಬ್ಯಾಂಕುಗಳಿಗೆ ಪ್ರತ ಭಾನುವಾರ ಹಾಗೂ ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ರಜೆ ನೀಡಲಾಗುತ್ತಿತ್ತು. ಆದರೆ ಬ್ಯಾಂಕ್ ಗಳಿಗೆ ಪ್ರತಿ ಶನಿವಾರ ಕೂಡ ರಜೆ ಇರುವುದರಿಂದ ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.​ಬಿ.ಐ ಪತ್ರಿಕಾಗೋಷ್ಠಿ ನಡೆಸಿ, ಬ್ಯಾಂಕ್‍ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಬೇಕು ಎಂದು ಆರ್​.ಬಿ.ಐ ಸೂಚನೆ ನೀಡಿಲ್ಲ.. ಇದಲ್ಲದೇ ಭಾನುವಾರ ರಜೆ ಹೊರತುಪಡಿಸಿ ಎಲ್ಲಾ ವಾಣಿಜ್ಯ ವ್ಯವಹಾರಗಳ ಬ್ಯಾಂಕ್‍ಗಳಿಗೆ ತಿಂಗಳ 2ನೇ ಮತ್ತು 4ನೇ ಶನಿವಾರ ಎಂದಿನಂತೆ ರಜೆ ಇರುತ್ತದೆ. ಉಳಿದ ಶನಿವಾರದಂದು ಬ್ಯಾಂಕ್‍ ಗಳಲ್ಲಿ ದಿನಪೂರ್ತಿ ಕೆಲಸ ನಡೆಯುತ್ತದೆ ಎಂದು ಸ್ಪಷ್ಟನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ