ಜಿಯೋ ದರ ಸಮರಕ್ಕೆ ಸೆಡ್ಡು ಹೊಡೆದ ಬಿಎಸ್‌ಎನ್‌ಎಲ್: ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್

ಶುಕ್ರವಾರ, 16 ಸೆಪ್ಟಂಬರ್ 2016 (19:13 IST)
ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಗ್ರೂಪ್ ಒಡೆಯ ಮುಕೇಶ್ ಅಂಬಾನಿ ನೇತೃತ್ವದ ಕಂಪೆನಿ ಜಿಯೋ ಆರಂಭಿಸಿದ ದರ ಸಮರಕ್ಕೆ ಇತರ ಕಂಪೆನಿಗಳು ಪೈಪೋಟಿ ನೀಡಲು ಆರಂಭಿಸಿವೆ.
 
ಏರ್‌‌ಟೆಲ್ ಮತ್ತು ಐಡಿಯಾ ಕಂಪೆನಿಗಳು ಈಗಾಗಲೇ ದರ ಸಮರಕ್ಕೆ ಇಳಿದಿದ್ದು, ಗ್ರಾಹಕರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಡಿಮೆ ದರದಲ್ಲಿ ನೀಡುವುದಾಗಿ ಘೋಷಿಸಿವೆ.
 
ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಜಿಯೋ ದರ ಸಮರಕ್ಕೆ ಸೆಡ್ಡುಹೊಡೆಯಲು ನಿರ್ಧರಿಸಿದ್ದು, ಗ್ರಾಹಕರಿಗೆ ಭಾರಿ ಕೊಡುಗೆಯನ್ನೇ ನೀಡಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಅನ್‌ಲಿಮಿಟೆಡ್‌ ಕಾಲ್‌ ಮತ್ತು ಡಾಟಾ ಸೌಕರ್ಯವನ್ನು ಪಡೆಯಬಹುದಾಗಿದೆ. 
 
ಬಿಬಿಜಿ ಕಾಂಬೋ ಪ್ಲಾನ್‌ ಅಡಿ ಬಿಎಸ್‌ಎನ್‌ಎಲ್‌ ಗ್ರಾಹಕರು 1,199 ರೂ. ಬೆಲೆಗೆ ಲಭ್ಯವಿರುವ 24 ತಾಸುಗಳ ಅನ್‌ಲಿಮಿಟೆಡ್‌ ಡಾಟಾ ಮತ್ತು  ಫ್ರೀ ಕಾಲ್‌ ಲೋಕಲ್‌ ಮತ್ತು ಎಸ್‌ಟಿಡಿ ಸೌಕರ್ಯವನ್ನು ಪಡೆಯಬಹುದು. ಭಾರತದಲ್ಲಿರುವ ಎಲ್ಲಾ ನೆಟ್ ವರ್ಕ್ ಗಳಿಗೂ ಸಂಪರ್ಕ ಸಾಧಿಸಬಹುದು ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ