ನೀವೂ ಚೀನಾ ಮೊಬೈಲ್ ಬಳಸುತ್ತಿದ್ದೀರಾ..? ಹುಷಾರ್ ಹುಷಾರ್..!

ಬುಧವಾರ, 16 ಆಗಸ್ಟ್ 2017 (18:08 IST)
ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ಅಪಾಯದ ಸೂಚನೆ ಸಿಕ್ಕಿದೆ. ಹೀಗಾಗಿ, ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ.

ವಿವೋ, ಒಪ್ಪೋ, ಷಿಯಾಮಿ, ಜಿಯೋನಿ ಕಂಪನಿಗಳಿಗೆ ನೋಟಿಸ್ ನೀಡಿರುವ ಕೇಂದ್ರ ಸರ್ಕಾರ, ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ವಿವರಣೆ ಕೇಳಿದೆ.  ಚೀನಾದಲ್ಲಿ ತಯಾರಾದ ಈ ಮೋಬೈಲ್`ಗಳು ಭಾರತೀಯರ ವೈಯಕ್ತಿಕ ಮಾಹಿತಿ ಮತ್ತು ಸಂದೇಶಗಳನ್ನ ಕದಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಚೀನಾಯೇತರ ಕಂಪನಿಗಳಾದ ಆಪಲ್, ಸ್ಯಾಮ್ ಸಂಗ್, ಭಾತರೀಯ ಕಂಪನಿ ಮೈಕ್ರೋ ಮ್ಯಾಕ್ಸ್ ಸೇರಿ 21 ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನೊಟಿಸ್ ನೀಡಲಾಗಿದೆ.

ಈ ಕಂಪನಿಗಳಿಗೆ ಆಗಸ್ಟ್ 28ರವರೆಗೆ ಕೇಂದ್ರ ಸರ್ಕಾರ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಭದ್ರತಾ ನಿಯಮಗಳ ಅನುಸರಣೆಯ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಒಂದೊಮ್ಮೆ ಭದ್ರತಾ ನಿಯಮ ಅನುಸರಣೆ ಉಲ್ಲಂಘನೆ ಸಾಬೀತಾದರೆ ಈ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಇದರ ಜೊತೆಗೆ ಕೇಂದ್ರ ಸರ್ಕಾರ, ಚೀನಾದಿಂದ ಆಮದಾಗುವ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ ಪರಿಶೀಲನೆಗೆ ಒಳಪಡಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ