ನೆಗೋಬಾಯ್ಡ್ ಇನ್ಸ್ಟ್ರುಮೆಂಟ್ಸ್ (ಎನ್ಐ) ಆಕ್ಟ್ ನಡಿ, ಕೋರ್ಟ್ ನಲ್ಲಿ ಕೇಸು ದಾಖಲಾದ ತಕ್ಷಣ, ಕೋರ್ಟ್ ನ ಹೊರಗೆ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ನಿರ್ದಿಷ್ಟ ಕಾಲಾವಧಿ ನೀಡಲಾಗುತ್ತದೆ. ಇದರಲ್ಲಿ ವಿಫಲವಾದರೆ ಬಾಕಿದಾರನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮತ್ತು ಜಾಮೀನು ನೀಡುವಾಗ ಕಠಿಣ ಷರತ್ತನ್ನು ವಿಧಿಸಲಾಗುತ್ತದೆ. ಕಳೆದ ವರ್ಷ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು, ಚೆಕ್ ನ್ನು ಕ್ಲಿಯರೆನ್ಸ್ಗಾಗಿ ನೀಡಲಾದ ಸ್ಥಳದಲ್ಲಿ ಕೇಸನ್ನು ಕೋರ್ಟ್ ನಲ್ಲಿ ದಾಖಲಿಸಲು ಅವಕಾಶ ನೀಡಲಾಗಿತ್ತು.