ಧರ್ಮಸ್ಥಳದಲ್ಲಿ ಇಂದು ಎಸ್ಐಟಿ ಕಾರ್ಯಾಚರಣೆ ಹೇಗಿರಲಿದೆ

Krishnaveni K

ಗುರುವಾರ, 31 ಜುಲೈ 2025 (09:51 IST)

ಮಂಗಳೂರು: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳಿಗಾಗಿ ಹುಡುಕಾಟ ನಡೆಸುತ್ತಿರುವ ಎಸ್ಐಟಿ ತಂಡದ ಇಂದಿನ ಕಾರ್ಯಾಚರಣೆ ಹೇಗಿರಲಿದೆ ಇಲ್ಲಿದೆ ವಿವರ.

ಈಗಾಗಲೇ ಎಸ್ಐಟಿ ತಂಡ ಅನಾಮಿಕ ವ್ಯಕ್ತಿ ಗುರುತು ಮಾಡಿರುವ ಐದು ಸ್ಥಳಗಳಲ್ಲಿ ಮಣ್ಣು ಅಗೆದು ಶೋಧ ಕಾರ್ಯ ನಡೆಸಿತ್ತು. ಆದರೆ ಐದೂ ಕಡೆಯಲ್ಲೂ ಅಸ್ಥಿಪಂಜರ ಸಿಗಲಿಲ್ಲ. ಆದರೆ ಒಂದು ಕಡೆ ಮಾತ್ರ ಒಂದು ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ರವಿಕೆ ತುಂಡು ಸಿಕ್ಕಿದೆ ಎನ್ನಲಾಗುತ್ತಿದೆ.

ಇಂದೂ ಎಸ್ಐಟಿ ತಂಡ ಕಾರ್ಯಾಚರಣೆ ನಡೆಸಲಿದೆ. ಇಂದು 10.30 ರಿಂದ ಆರನೇ ಸ್ಥಳದಲ್ಲಿ ಅಗೆಯುವ ಕಾರ್ಯ ಶುರುವಾಗಲಿದೆ. ನಿನ್ನೆ ರಾತ್ರಿ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಬೆಳ್ತಂಗಡಿಯಲ್ಲಿ ತಮ್ಮ ಟೀಂ ಜೊತೆ ಸಭೆ ನಡೆಸಿದ್ದಾರೆ. ಇಂದಿನ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇಂದೂ ಕೂಡಾ ಅಜ್ಞಾತ ವ್ಯಕ್ತಿಯನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಲಾಗುತ್ತದೆ. ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದ. ಈ ಪೈಕಿ ಐದು ಸ್ಥಳಗಳಲ್ಲಿ ಶೋಧ ಕಾರ್ಯ ಮುಕ್ತಾಯವಾಗಿದೆ. ನಿನ್ನೆ ಪ್ರಣಬ್ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಇಂದೂ ಅವರು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ