ಮೇಕ್ ಇನ್ ಇಂಡಿಯಾದತ್ತ ಚತ್ತೀಸ್‌ಗಢ್ ಚಿತ್ತ: ಸಿಎಂ ರಮಣ್ ಸಿಂಗ್

ಗುರುವಾರ, 1 ಸೆಪ್ಟಂಬರ್ 2016 (17:59 IST)
'ಮೇಕ್ ಇನ್ ಇಂಡಿಯಾ' ಯೋಜನೆ ನಮ್ಮ ಸರಕಾರದ ಮುಖ್ಯ ಆದ್ಯತೆಯಾಗಿದ್ದು, ಬಂಡವಾಳ ಹೂಡಕೆದಾರರನ್ನು ಆಕರ್ಷಿಸಲು ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸುತ್ತಿದ್ದೇವೆ ಎಂದು ಛತ್ತೀಸ್‌ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. 
 
ಛತ್ತೀಸ್‌ಗಡ್ ರಾಜ್ಯದಲ್ಲಿ ವ್ಯಾಪಾರ ವಹಿವಾಟಿನ ಪ್ರಕ್ರಿಯೆಗಳನ್ನು ಮತ್ತಷ್ಟು ಸುಲಭಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ಹೊಸದಾಗಿ ವ್ಯಾಪಾರ ಪ್ರಾರಂಭಿಸಲು ಅನುಮತಿ ನೀಡವಾಗ ವಿವಿಧ ಇಲಾಖೆಗಳು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯವನ್ನು ಕುಗ್ಗಿಸಿದ್ದೇವೆ. ಇದೀಗ, ವ್ಯಾಪಾರೀಕರಣಕ್ಕೆ ನೀಡುವ ಅನುಮತಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಮೂಲಕ ನಮ್ಮ ಸರಕಾರ 'ಮೇಕ್ ಇನ್ ಇಂಡಿಯಾ' ಹಾಗೂ 'ಮೇಕ್ ಇನ್ ಛತ್ತೀಸ್‌ಗಡ್' ಯೋಜನೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಹಾಗೂ ಛತ್ತೀಸ್‌ಗಡ್ ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಯತ್ನಿಸುತ್ತಿದ್ದೇವೆ ಎಂದು ಹೇಳಿದರು. 
 
ವಿವಿಧ ಜಿಲ್ಲೆಗಳಲ್ಲಿರುವ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಮತ್ತು ಅಡಳಿತರೂಢ ಸಚಿವರು, ಮಾಧ್ಯಮ ಸೇರಿದಂತೆ ಇತರ ಸಂಪರ್ಕ ಕ್ಷೇತ್ರಗಳನ್ನು ಬಳಸಿಕೊಂಡು ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.  
 
ನಾವು ರಾಜ್ಯದ ಯಶಸ್ವಿನ ಕುರಿತು ಚರ್ಚೆ ನಡೆಸುತ್ತೇವೆ. ಈ ಕುರಿತು ರಾಜ್ಯದ ಜನತೆಯ ಅಭಿಪ್ರಾಯವನ್ನು ಸಂಗ್ರಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
 
ಉಜ್ವಲ ಯೋಜನೆ, ರಸ್ತೆ ನಿರ್ಮಾಣ, ವೈದ್ಯಕೀಯ ಕಾಲೇಜುಗಳ ಪಾತ್ರ, ಸೇತುವೆಗಳು, ಜಲಾಶಯ ಯೋಜನೆಗಳ ಕುರಿತು ಸಾರ್ವಜನಿಕರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಛತ್ತೀಸ್‌ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ