ಜಿಯೋಗೆ ಶಾಕ್.. 200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್

ಗುರುವಾರ, 30 ಮಾರ್ಚ್ 2017 (14:01 IST)
ಉಚಿತ ಡೇಟಾ, ಉಚಿತ ಕರೆ ಮೂಲಕ 100 ಮಿಲಿಯನ್ ಗ್ರಾಹಕರನ್ನ ಬಹುಬೇಗ ತಲುಪಿದ ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಟೆಲಿಕಾಂ ಕಂಪನಿ ಸೆಡ್ಡು ಹೊಡೆಯಲು ಮುಂದಾಗಿದೆ. ಜಿಯೋ 303 ರೂ. ತಿಂಗಳ ಚಾರ್ಜ್`ನಲ್ಲಿ 4ಜಿ ಡೇಟಾ ನೀಡುತ್ತಿದ್ದರೆ, ಈ ಹೊಸ ಕಂಪನಿ ಕೇವಲ 200 ರೂಪಾಯಿಗೆ ವಾರ್ಷಿಕ 4ಜಿ ಡೇಟಾ ನೀಡಲು ಸಜ್ಜಾಗಿದೆ.
 













ಕೆನಡಾ ಮೂಲದ ಮೊಬೈಲ್ ಸಂಸ್ಥೆ ಡಾಟಾವಿಂಡ್ ಕಂಪನಿ 200 ರೂಪಾಯಿ ವರ್ಷಪೂರ್ತಿ 4ಜಿ ಡೇಟಾ ಆಫರ್ ಪರಿಚಯಿಸಲು ಚಿಂತನೆ ನಡೆಸಿದೆ. ಕಂಪನಿ 100 ಕೋಟಿ ರೂ. ಹೂಡಿಕೆ ಮಾಡಿ ತನ್ನ ಟೆಲಿಕಾಂ ಉದ್ಯಮ ವಿಸ್ತರಿಸಲು ಸಜ್ಜಾಗಿದೆ.

ಅಗ್ಗದ ಬೆಲೆಯ ಮೊಬೈಲ್ ಮತ್ತು ಟ್ಯಾಬ್ಲೆಟ್ ತಯಾರಿಕೆ ಮೂಲಕ ಹೆಸರು ಮಾಡಿರುವ ಡಾಟಾವಿಂಡ್ ಕಂಪನಿ ಮೊಬೈಲ್ ನೆಟ್ವರ್ಕ್` ಪರವಾನಗಿಗೆ ಈಗಾಗಲೇ ಅರ್ಜಿ ಸಲ್ಲಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಗಳ ಜೊತೆ ಒಡಂಬಡಿಕೆ ಮೂಲಕವಷ್ಠೆ ಈ ಕಂಪನಿ ಸೇವೆ ಒದಗಿಸಲಿದೆ.

CLICK HERE..   ಸುದೀಪ್ ಹೆಸರಲ್ಲಿ ನಕಲಿ ಟ್ವೀಟ್.. ಟ್ವೀಟ್`ನಲ್ಲಿ ಏನಿದೆ ಗೊತ್ತಾ..?

ವೆಬ್ದುನಿಯಾವನ್ನು ಓದಿ