ಪ್ರಸಿದ್ಧ ಆನ್ ಲೈನ್ ಮಾರಾಟ ತಾಣ ಸ್ನಾಪ್ ಡೀಲ್ ಸದ್ಯದಲ್ಲೇ ಫ್ಲಿಪ್ ಕಾರ್ಟ್ ವಶವಾಗಲಿದೆ. 900-950 ಮಿಲಿಯನ್ ಡಾಲರ್ ತನ್ನ ಉದ್ಯಮವನ್ನ ಮಾರಾಟ ಮಾಡಲು ಸ್ನ್ಯಾಪ್ ಡೀಲ್ ಬೋರ್ಡ್ ಒಪ್ಪಿಗೆ ಸೂಸಿದೆ ಎಂದು ರಾಯಿಟರ್ಸ್ ಮೂಲಗಳನ್ನ ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.
ಆಡಳಿತ ಮಂಡಳಿ ಗ್ರೀನ್ ಸಿಗ್ನಲ್ ಬಳಿಕ ರತನ್ ಟಾಟಾ ಸೇರಿದಂತೆ ಷೇರುದಾರರ ಅಭಿಪ್ರಾಯ ಪಡೆಯಲು ಸ್ನಾಪ್ ಡೀಲ್ ಸಿಕ್ಕ ಬಳಿಕ ಫ್ಲಿಪ್ ಕಾರ್ಟ್ ಜೊತೆ ವಿಲೀನಕ್ಕೆ ಅಂತಿಮ ಮುದ್ರೆ ಬೀಳಲಿದೆ. ಆದರೆ, ಈ ಬಗ್ಗೆ ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್`ನಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್` ಡೀಲ್ ಕುದುರಿದ ಬಳಿಕ ದೇಶದ ಅತ್ಯಂತ ದೊಡ್ಡ ಆನ್ ಲೈನ್ ಮಾರುಕಟ್ಟೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಅಮೇಜಾನ್ ಸ್ಪರ್ಧೆ ಎದುರಿಸಲು ಫ್ಲಿಪ್ ಕಾರ್ಟ್ ಸಂಸ್ಥೆ ಸ್ನಾಪ್ ಡೀಲ್ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ