ಬೆಂಗಳೂರು: ಲಕ್ಷದ ಗಡಿ ತಲುಪಿದ್ದ ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಕೊಂಚ ಇಳಿಕೆಯಾಗಿದೆ. ಹಾಗಂತ ಸಮಧಾನಪಡುವಷ್ಟೇನೂ ಇಳಿಕೆಯಾಗಿಲ್ಲ. ಇತರೆ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಲಕ್ಷದ ಗಡಿ ದಾಟಿಟ್ಟದ್ದ ಚಿನ್ನದ ದರ ಕಳೆದ ವಾರ ಕೊಂಚ ಇಳಿಕೆಯಾಗಿದ್ದರಿಂದ ಗ್ರಾಹಕರಿಗೆ ನೆಮ್ಮದಿಯಾಗಿತ್ತು. ಆದರೆ ಈ ವಾರದ ಆರಂಭದಿಂದಲೇ ಚಿನ್ನದ ದರ ಮತ್ತೆ ಏರುಗತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಕೊಂಚವೇ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ 98,510 ರೂ.ಗೆ ಬಂದು ನಿಂತಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 55 ರೂ. ಏರಿಕೆಯಾಗಿದ್ದು 9,808 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 50 ರೂ. ಏರಿಕೆಯಾಗಿದ್ದು 8,990 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 41 ರೂ. ಏರಿಕೆಯಾಗಿದ್ದು 7,356 ರೂ. ರಷ್ಟಾಗಿದೆ.
ಬೆಳ್ಳಿದರ
ಬೆಳ್ಳಿ ದರವೂ ದರ ಖರೀದಿದಾರರಿಗೆ ಇಂದು ಸಮಾಧಾನಕರ ಸುದ್ದಿ.. ಇಂದು ಬೆಳ್ಳಿ ದರವೂ ತಕ್ಕ ಮಟ್ಟಿಗೆ ಇಳಿಕೆಯಾಗಿದೆ. ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಇಳಿಕೆಯಾಗಿದ್ದು ಇಂದು 99, 900 ರೂ.ಗೆ ಬಂದು ತಲುಪಿದೆ.