Gold price today: ಯುಗಾದಿಗೆ ಸಿಹಿ ಸುದ್ದಿ, ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Krishnaveni K

ಶನಿವಾರ, 22 ಮಾರ್ಚ್ 2025 (09:26 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ದರ ಇದೀಗ ಇಳಿಕೆಯತ್ತ ಸಾಗಿದೆ. ಯುಗಾದಿಗೆ ಚಿನ್ನ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ನಿಜಕ್ಕೂ ಗುಡ್ ನ್ಯೂಸ್. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಆದರೆ ಇದೀಗ ಎರಡು ದಿನಗಳಿಂದ ಇಳಿಕೆಯಾಗಿದೆ. ಇಂದು ನಿನ್ನೆ ಬರೋಬ್ಬರಿ 91, 280 ರೂ.ಗಳಷ್ಟಾಗಿತ್ತು. ಇಂದು ಬೆಂಗಳೂರಿನಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆ 90,955 ರೂ. ಆಗಿದೆ.

ಇಂದು  22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 1 ರೂ. ಇಳಿಕೆಯಾಗಿದ್ದು 8,269 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 1 ರೂ. ಇಳಿಕೆಯಾಗಿದ್ದು 9,021 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ರೂ. ಇಳಿಕೆಯಾಗಿದ್ದು ಇಂದು ಗ್ರಾಂಗೆ 6,766 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿಯ ದರವೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಪ್ರತೀ ಕೆಜಿಗೆ 100  ರೂ.ಗಳಷ್ಟು ಇಳಿಕೆಯಾಗಿ 1,02,900 ರೂ.ಗಳಿಗೆ ಬಂದು ತಲುಪಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದೀಗ ಇಳಿಕೆಯತ್ತ ಸಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ