Gold Price today: ಅಬ್ಬಬ್ಬಾ.. ಮಿತಿ ಮೀರಿದ ಚಿನ್ನದ ದರ, ಇಂದು ಎಷ್ಟಾಗಿದೆ ನೋಡಿ

Krishnaveni K

ಬುಧವಾರ, 19 ಮಾರ್ಚ್ 2025 (10:15 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಶಾಕ್ ಆಗುವಂತಿದೆ. ಇಂದು ಚಿನ್ನ, ಬೆಳ್ಳಿ ದರ ಎಷ್ಟಾಗಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ದರ ದಿನೇ ದಿನೇ ಭಾರೀ ಏರಿಕೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ 1 ಲಕ್ಷ ರೂ. ತಲುಪಲಿದೆ. ಈ ಪರಿ ಬೆಲೆ ಏರಿಕೆ ಗಮನಿಸಿದರೆ ಮಧ್ಯಮ ವರ್ಗದ ಜನ ಚಿನ್ನ ಕೊಳ್ಳುವುದೂ ಕನಸಾಗಲಿದೆ. ಮದುವೆ ಸೀಸನ್ ಆರಂಭವಾಗುತ್ತಿದ್ದಂತೇ ಚಿನ್ನದ ದರ ನಾಗಲೋಟ ಮುಂದುವರಿದಿದೆ. ಇಂದು 99.9 ಶುದ್ಧತೆಯ 10 ಗ್ರಾಂ ಚಿನ್ನ ದಬೆಲೆ ನಿನ್ನೆಗಿಂತಲೂ 500 ರೂ. ಏರಿಕೆಯಾಗಿದ್ದು 91,250 ರೂ.ಗೆ ಬಂದು ತಲುಪಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 440 ರೂ.ಗಳಷ್ಟು ಏರಿಕೆಯಾಗಿದ್ದು 90000 ರೂ.ಗಳಿವೆ ಬಂದು ತಲುಪಿದೆ. ಇಂದು  22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 40 ಏರಿಕೆಯಾಗಿದ್ದು 8,290 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 44 ರೂ. ಏರಿಕೆಯಾಗಿದ್ದು 9,044 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 6,783 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿಯ ದರವೂ ಚಿನ್ನಕ್ಕೆ ಪೈಪೋಟಿ ನೀಡುತ್ತಿದೆ. ಆದರೆ ನಿನ್ನೆ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದೆ. ಆದರೆ ಇಂದು ಮತ್ತೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಪ್ರತೀ ಗ್ರಾಂಗೆ 1 ರೂ.ಗಳಷ್ಟು ಏರಿಕೆಯಾಗಿ 105 ರೂ.ಗಳಿಗೆ ಬಂದು ತಲುಪಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ