Gold Price today: ಅಪರೂಪಕ್ಕೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ, ಎಷ್ಟಾಗಿದೆ ನೋಡಿ

Krishnaveni K

ಸೋಮವಾರ, 17 ಮಾರ್ಚ್ 2025 (09:10 IST)
ಬೆಂಗಳೂರು: ಮಧ್ಯಮ ವರ್ಗದವರಿಗೆ ಚಿನ್ನ ಖರೀದಿ ಮಾಡುವುದು ಈಗ ಭಾರೀ ಹೊರೆಯಾಗಿದೆ. ಯಾಕೆಂದರೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಆದರೆ ಇಂದಿನ ಮಟ್ಟಿಗೆ ಕೊಂಚ ಇಳಿಕೆಯಾಗಿದೆ ಎನ್ನಬಹುದು. ಇಂದಿನ ಚಿನ್ನ, ಬೆಳ್ಳಿ ದರ ಹೇಗಿದೆ ಇಲ್ಲಿದೆ ವಿವರ.
ಚಿನ್ನದ ದರ ಏರಿಕೆ

ಚಿನ್ನದ ದರ ದಿನೇ ದಿನೇ ಭಾರೀ ಏರಿಕೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ 1 ಲಕ್ಷ ರೂ. ತಲುಪಲಿದೆ. ಈ ಪರಿ ಬೆಲೆ ಏರಿಕೆ ಗಮನಿಸಿದರೆ ಮಧ್ಯಮ ವರ್ಗದ ಜನ ಚಿನ್ನ ಕೊಳ್ಳುವುದೂ ಕನಸಾಗಲಿದೆ. ಹಾಗಿದ್ದರೂ ಇಂದು ಚಿನ್ನದ ಬೆಲೆಯಲ್ಲಿ ಕೇವಲ 1 ರೂ.ಗಳಷ್ಟು ಇಳಿಕೆಯಾಗಿದೆ. ಇಂದು  22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯಾಗಿ ಪ್ರತೀ ಗ್ರಾಂಗೆ 8,219 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 8,966 ರೂ. ರಷ್ಟಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 6,725 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿಯ ದರವೂ ಚಿನ್ನಕ್ಕೆ ಪೈಪೋಟಿ ನೀಡುತ್ತಿದೆ. ಆದರೆ ಇಂದು ಬೆಳ್ಳಿ ಬೆಲೆಯಲ್ಲೂ ಸ್ವಲ್ಪ ಇಳಿಕೆಯಾಗಿದೆ. ಬೆಳ್ಳಿ ಬೆಲೆ ನಿನ್ನೆ ಪ್ರತೀ ಗ್ರಾಂಗೆ 103 ರೂ.ಗಳಷ್ಟಿತ್ತು. ಇಂದು ಇದು 102 ರೂ.ಗಳಷ್ಟು ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ