ಬೆಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಶಾಕ್ ಆಗುವಂತಿದೆ. ಇಂದು ಮತ್ತೆ ಚಿನ್ನ, ಬೆಳ್ಳಿ ದರ ಹೆಚ್ಚಾಗಿದ್ದು ಇಂದಿನ ದರ ಎಷ್ಟು ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ 10 ಗ್ರಾಂ ಚಿನ್ನ ದಬೆಲೆ ನಿನ್ನೆಗಿಂತಲೂ 500 ರೂ. ಏರಿಕೆಯಾಗಿದ್ದು 91,250 ರೂ.ಗಳಿತ್ತು. ಇಂದು ಮತ್ತೆ 700 ರೂ. ಏರಿಕೆಯಾಗಿದ್ದು ಬರೋಬ್ಬರಿ 91,950 ರೂ.ಗಳಷ್ಟಾಗಿದೆ. ಚಿನ್ನದ ದರ ಏರಿಕೆ ಆಗುತ್ತಿರುವ ವೇಗ ಗಮನಿಸಿದರೆ ಕೆಲವೇ ದಿನಗಳಲ್ಲಿ 1 ಲಕ್ಷ ರೂ. ತಲುಪಲಿದೆ. ಮದುವೆ ಸೀಸನ್ ಆರಂಭವಾಗುತ್ತಿದ್ದಂತೇ ಚಿನ್ನದ ದರ ನಾಗಲೋಟ ಮುಂದುವರಿದಿದೆ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 1 ಏರಿಕೆಯಾಗಿದ್ದು 8,291 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 1 ರೂ. ಏರಿಕೆಯಾಗಿದ್ದು 9,045 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 6,784 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿಯ ದರವೂ ಭಾರೀ ಏರಿಕೆಯಾಗುತ್ತಿದೆ. ಇಂದು ಮತ್ತೆ ಏರಿಕೆಯಾಗಿದ್ದು ಬೆಳ್ಳಿ ಬೆಲೆ ಪ್ರತೀ ಕೆಜಿಗೆ 100 ರೂ.ಗಳಷ್ಟು ಏರಿಕೆಯಾಗಿ 1,05,100 ರೂ.ಗಳಿಗೆ ಬಂದು ತಲುಪಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.