ಬೆಂಗಳೂರು: ಚಿನ್ನದ ದರ ಎರಡು ದಿನಗಳ ಹಿಂದೆ ಸತತವಾಗಿ ಇಳಿಕೆಯಾಗಿದ್ದರಿಂದ ಗ್ರಾಹಕರು ನೆಮ್ಮದಿಯಾಗಿದ್ದರು. ಆದರೆ ಈಗ ಮತ್ತೆ ಶಾಕ್ ಆಗುವಂತೆ ಚಿನ್ನದ ದರ ಏರಿಕೆಯಾಗುತ್ತಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ದರ ಸತತ ಎರಡು ದಿನ ಇಳಿಕೆಯಾಗಿತ್ತು. ಲಕ್ಷದ ಗಡಿ ದಾಟಿದ್ದ ಚಿನ್ನದ ದರ ಇಳಿಕೆಯಾಗಿದ್ದರಿಂದ ಗ್ರಾಹಕರೂ ನೆಮ್ಮದಿಯಾಗಿದ್ದರು. ಆದರೆ ವಾರದ ಆರಂಭದಲ್ಲೇ ಕೊಂಚ ಏರಿಕೆಯಾಗಿದ್ದು ಮತ್ತೆ ಗ್ರಾಹಕರ ಚಿಂತೆಗೆ ಕಾರಣವಾಗಿದೆ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಗ್ರಾಹಕರಿಗೆ ಇಂದಿನ ಬೆಲೆ ಶಾಕ್ ಆಗುವಂತಿದೆ. ಪರಿಶುದ್ಧ ಚಿನ್ನದ ಬೆಲೆ ನಿನ್ನೆ 96,555 ರೂ.ಗಳಷ್ಟಿದೆ. ಇಂದು ಮತ್ತಷ್ಟು ಏರಿಕೆಯಾಗಿದ್ದು 98,385.00 ರೂ.ಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 250 ರೂ. ಏರಿಕೆಯಾಗಿದ್ದು 9,025 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 273 ರೂ. ಏರಿಕೆಯಾಗಿದ್ದು 9,846 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 204 ಏರಿಕೆಯಾಗಿದ್ದು 7,384 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿದೆ. ಇಂದೂ ಕೂಡಾ ಬೆಳ್ಳಿ ದರ ಮತ್ತೆ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ 100 ರೂ. ನಷ್ಟು ಇಳಿಕೆಯಾಗಿದ್ದು ಇಂದು 96,900 ರೂ.ಗಳಾಗಿತ್ತು.