ಮುಂಬೈ : ಬಂಗಾರವೆಂದರೆ ಯಾರಿಗೆ ಇಷ್ಟವಿರಲ್ಲ. ಎಲ್ಲರೂ ಬಂಗಾರ ಪ್ರಿಯರೇ. ಆದರೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿರುವಂತೆ ಭಾರತೀಯರಿಗೆ ಬಂಗಾರದ ಮೇಲಿನ ಪ್ರೀತಿ ಕಡಿಮೆಯಾಗಿದೆಯಂತೆ.
ಹೌದು. ವರ್ಲ್ಡ್ ಗೋಲ್ಡ್ ಕೌನ್ಸಿಲ್ 2ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಂಗಾರ ಬೇಡಿಕೆಶೇ 8ರಷ್ಟು ಕಡಿಮೆಯಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 161 ಟನ್ ಬಂಗಾರ ಆಮದು ಮಾಡಿಕೊಳ್ಳಲಾಗಿತ್ತು.ಈ ಬಾರಿ ಅದು 147 .9 ಟನ್ಗೆ ಇಳಿಕೆ ಕಂಡಿದೆ. ಇದರ ಜತೆಗೆ ಈ ವರ್ಷ ಬಂಗಾರದ ಮೇಲಿನ ಹೂಡಿಕೆಯೂ ಶೇ. 5 ರಷ್ಟು ಕಡಿಮೆಯಾಗಿದೆ ಎಂಬುದು ಈ ವರದಿಯಿಂದ ತಿಳಿದು ಬಂದಿದೆ.
ದೇಶದಲ್ಲಿ ಉತ್ತಮ ಮಾನ್ಸೂನ್ ಬಂದಿದ್ದು, ಜನ ಕೃಷಿಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಹಬ್ಬಗಳ ಸೀಜನ್ ಸಹ ಇಲ್ಲದೇ ಇರುವುದು ಎರಡನೇ ತ್ರೈ ಮಾಸಿಕದಲ್ಲಿ ಬಂಗಾರದ ಬೇಡಿಕೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ