ಗೂಗಲ್`ನಲ್ಲಿ ಈಗ ಕನ್ನಡದಲ್ಲೂ ವಾಯ್ಸ್ ಸರ್ಚ್ ಮಾಡಬಹುದು..!

ಮಂಗಳವಾರ, 15 ಆಗಸ್ಟ್ 2017 (15:57 IST)
ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ಮಾಡುತ್ತಿರುತ್ತದೆ. ಈ ಬಾರಿ ಗೂಗಲ್ ಸಂಸ್ಥೆ 8 ಭಾಷೆಗಳಲ್ಲಿ ವಾಯ್ಸ್ ಸರ್ಚ್ ಮಾಡುವ ತಂತ್ರಜ್ಞಾನ ಅಳವಡಿಸಿದೆ.
 

ಸದ್ಯ, ಆಂಡ್ರಾಯ್ಡ್ ಫೋನ್`ಗಳಲ್ಲಿ ವಾಯ್ಸ್ ಮೂಲಕ ಸರ್ಚ್ ಮಾಡುವ ವ್ಯವಸ್ಥೆ ಇದೆ. ಆದರೆ, ಇದುವರೆಗೆ ಇಂಗ್ಲೀಷ್  ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಿದರೆ ಮಾತ್ರ ಸರ್ಚ್ ಎಂಜಿನ್ ಗ್ರಹಿಸುತ್ತಿತ್ತು. ಇದೀಗ, ಭಾರತದ 8 ಭಾಷೆಗಳನ್ನ ಅರ್ಥ ಮಾಡಿಕೊಂಡು ಸರ್ಚ್ ಮಾಡುವ ತಂತ್ರಜ್ಞಾನವನ್ನ ಅಳವಡಿಸಲಾಗಿದೆ.  ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಗುಜರಾತಿ, ಬೆಂಗಾಲಿ, ಉರ್ದು, ಮರಾಠಿ ಭಾಷೆಗಳಲ್ಲಿ ಗೂಗಲ್ ಸರ್ಚ್ ಎಂಜಿನ್`ನಲ್ಲಿ ಬಳಸಬಹುದಾಗಿದೆ. ಇಂದಿನಿಂದಲೇ ಈ ಹೊಸ ಸೇವೆಯನ್ನ ಗೂಗಲ್ ಸಂಸ್ಥೆ ಅಳವಡಿಸುತ್ತಿದೆ.

ಗೂಗಲ್ ಸರ್ಚ್ ಮತ್ತು ಜಿ ಬೋರ್ಡ್`ಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಭಾರತದ 8 ಭಾಷೆಗಳು ಸೇರಿ 30 ಭಾಷೆಗಳನ್ನ ಗೂಗಲ್ ವಾಯ್ಸ್ ಸರ್ಚ್`ಗೆ ಅಳವಡಿಸಲಾಗಿದೆ. ಭಾರತೀಯ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗುವ ದೃಷ್ಟಿಯಿಂದ ವಾಯ್ಸ್ ಸರ್ಚ್ ವ್ಯಾಪ್ತಿಯನ್ನ ಇತರೆ ಭಾಷೆಗಳಿಗೂ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ