ಎಸ್ ಬಿ ಐನಲ್ಲಿ ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡುವುದು ಹೇಗೆ ಗೊತ್ತಾ?

ಶನಿವಾರ, 16 ಮಾರ್ಚ್ 2019 (09:10 IST)
ನವದೆಹಲಿ : ಎಟಿಎಂ ಕಾರ್ಡ್ ನಿಂದಾಗುವ ಮೋಸವನ್ನು ತಪ್ಪಿಸಲು ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ ಬಿ ಐ ತನ್ನ ಗ್ರಾಹಕರಿಗಾಗಿ ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡುವಂತಹ ಹೊಸ ಸೇವೆಯನ್ನು ಶುರು ಮಾಡಿದೆ.


ಎಸ್ ಬಿ ಐ ಈ ಹೊಸ ಸೇವೆಗೆ ಎಟಿಎಂನಲ್ಲಿ ಯೊನೋ ಕ್ಯಾಶ್ ಪಾಯಿಂಟ್ ಎಂದು ಹೆಸರಿಡಲಾಗಿದೆ., ಇದರಿಂದ ಎಟಿಎಂ ಕಾರ್ಡ್ ಅವಶ್ಯಕತೆ ಇಲ್ಲದೇ ಎಸ್ ಬಿ ಐ ಬ್ಯಾಂಕ್ ನಿಂದ 1.65 ಲಕ್ಷ ರೂಪಾಯಿ ಡ್ರಾ ಮಾಡಬಹುದಾಗಿದೆ. ಈ ಮೂಲಕ ಎಟಿಎಂ ಮೂಲಕ ಹಣ ಡ್ರಾ ಮಾಡುವ ಸೇವೆಯನ್ನು ಶುರು ಮಾಡಿರುವ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಯೋನೊ ಆಪ್ ನಲ್ಲಿ ಹಣ ವರ್ಗಾವಣೆಗೆ 6 ಡಿಜಿಟಲ್ ಪಿನ್ ನೀಡಲಾಗುವುದು. ಮೊಬೈಲ್ ನಲ್ಲಿ ಎಸ್ ಎಂ ಎಸ್ ಮೂಲಕ 6 ಅಂಕಿಯ ರೆಫರೆನ್ಸ್ ನಂಬರ್ ಕೂಡ ಸಿಗಲಿದೆ. ನಂತರ ನಿಮ್ಮ ಹತ್ತಿರದ ಎಟಿಎಂಗೆ ಹೋಗಿ 6 ಡಿಜಿಟಲ್ ನಂಬರ್ ಹಾಗೂ 6 ರೆಫರೆನ್ಸ್ ನಂಬರ್ ಹಾಕಬೇಕಿದರೆ. 30 ಸೆಕೆಂಡಿನಲ್ಲಿ ಹಣ ಡ್ರಾ ಮಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ