ತೆರಿಗೆಯನ್ನೂ ವಂಚಿಸುತ್ತಿರುವ ಕೇರಳದ ಅಕ್ರಮ ಟ್ಯಾಕ್ಸಿಗಳು!
ಕೊಡಗು, ಪ್ರವಾಸೋದ್ಯಮ ಜಿಲ್ಲೆಯಾಗಿ ಸಾಕಷ್ಟು ಹೆಸರು ಗಳಿಸಿದೆ. ಈ ಪ್ರವಾಸೋದ್ಯಮವನ್ನೇ ನಂಬಿಕೊಂಡು ಇಂದು ಅಲ್ಲಿ ಹಲವು ಉದ್ಯಮಗಳು ತಲೆ ಎತ್ತಿವೆ.
ಅದ್ರಲ್ಲಿ ಟ್ಯಾಕ್ಸಿ ಬಿಸ್ನೆಸ್ ಕೂಡ ಒಂದು. ಆದ್ರೆ ಕೇರಳ ರಾಜ್ಯದ ಅಕ್ರಮ ಟ್ಯಾಕ್ಸಿ ವ್ಯವಹಾರ ಕೊಡಗಿನ ಟ್ಯಾಕ್ಸಿಗಳ ಆದಾಯ ಕಿತ್ತುಕೊಳ್ಳುತ್ತಿರೋದು ಮಾತ್ರವಲ್ಲದೆ ರಾಜ್ಯಕ್ಕೆ ತೆರಿಗೆಯನ್ನೂ ವಂಚಿಸುತ್ತಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.