ನೋಯ್ಡಾದಲ್ಲಿ ಈ ನಿಯಮ ಮೀರಿದ ವಾಹನ ಸವಾರರಿಗೆ ಪೆಟ್ರೋಲ್ ಸಿಗುದಿಲ್ಲವಂತೆ

ಭಾನುವಾರ, 2 ಜೂನ್ 2019 (07:11 IST)
ನೋಯ್ಡಾ : ನೋಯ್ಡಾದಲ್ಲಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ . ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಹೌದು. ನೋಯ್ಡಾದಲ್ಲಿ ಹೆಲ್ಮೆಟ್ ಧರಿಸದೆ ಬೈಕ್, ಸ್ಕೂಟಿ ಚಲಾಯಿಸಿದ ವಾಹನ ಸವಾರರಿಗೆ ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ನೀಡಬಾರದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಸುರಕ್ಷಾ ಯೋಜನೆಯಡಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶನಿವಾರದಿಂದ ಈ ನಿಯಮ  ಜಾರಿಗೆ ಬಂದಿದೆ.

 

ದೆಹಲಿ ಪಕ್ಕದಲ್ಲಿರುವ ನೋಯ್ಡಾಗೆ ಬರ್ತಿದ್ದಂತೆ ವಾಹನ ಸವಾರರು ಹೆಲ್ಮೆಟ್ ರಹಿತ ವಾಹನ ಚಲಾವಣೆ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್ ಹೀಗೆ ಅನೇಕ ನಿಯಮಗಳನ್ನು ಮುರಿಯುತ್ತಾರಂತೆ. ಹಾಗಾಗಿ ನೋಯ್ಡಾದಲ್ಲಿ ಕೂಡ ನಿಯಮ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ