ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಾಹನ ಸವಾರರಿಗೆ ಶಾಕ್

ಮಂಗಳವಾರ, 21 ಮೇ 2019 (09:22 IST)
ನವದೆಹಲಿ: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಾಹನ ಸವಾರರಿಗೆ ಶಾಕ್ ಸಿಕ್ಕಿದೆ. ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ದಿನವೂ ಏರಿಕೆಯಾಗಿದೆ.


ಸೋಮವಾರ ಪೆಟ್ರೋಲ್, ಬೆಲೆಯಲ್ಲಿ 7 ರಿಂದ 10 ಪೈಸೆಯಷ್ಟು ಏರಿಕೆ ಕಂಡಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 71.17 ರೂ. ಆಗಿದ್ದರೆ, ಮುಂಬೈಯಲ್ಲಿ 76.78 ರೂ. ಗೆ ಏರಿಕೆಯಾಗಿದೆ.

ಮುಂದಿನ ಕೆಲವು ತಿಂಗಳು ಈ ಬೆಲೆ ಏರಿಕೆ ಮುಂದುವರಿಯಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಡೀಸೆಲ್ ಬೆಲೆಯಲ್ಲೂ 10 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಡೀಸೆಲೆ ಬೆಲೆ 66.20 ರೂ. ಮತ್ತು ಮುಂಬೈಯಲ್ಲಿ 69.36 ರೂ. ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ