ಇಂದು ಪೆಟ್ರೋಲ್ ಬೆಲೆಯಲ್ಲಿ ಏರಿಕೆ, ಡಿಸೇಲ್ ಬೆಲೆಯಲ್ಲಿ ಸ್ಥಿರತೆ

ಸೋಮವಾರ, 24 ಫೆಬ್ರವರಿ 2020 (06:34 IST)
ನವದೆಹಲಿ : ಇಂದು  ಪೆಟ್ರೋಲ್ ಬೆಲೆಯಲ್ಲಿ  7ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆಯಲ್ಲಿ 5 ಪೈಸೆ ಹೆಚ್ಚಳ  ಕಂಡುಬಂದಿದೆ.


ಅದರಂತೆ  ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 72.01 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 64.70ರೂ. ಆಗಿದೆ. ಮುಂಬೈ  ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 77.67ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 67.80 ರೂ. ಆಗಿದೆ.


ಹಾಗೇ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 74.46 ರೂ. ಹಾಗೂ ಡೀಸೆಲ್ ಬೆಲೆ 66.89 ರೂ. ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 74.65ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 67.02 ರೂ. ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ