ಟಾಟಾ ಕಾರುಗಳು ಜುಲೈನಲ್ಲಿ 47,505 ಕಾರುಗಳ ಮಾರಾಟ ಮಾಡಿದ್ದು, ಮತ್ತೊಂದು ದಾಖಲೆ ಬರೆದಿದೆ. ಕಳೆದ ವರ್ಷಕ್ಕೆ ಟಾಟಾ ಕಾರುಗಳ ಮಾರಾಟ ಶೇ. 57ರಷ್ಟು ಏರಿಕೆಯಾಗಿದೆ.
ಇನ್ನೊಂದೆಡೆ ಪ್ರತಿಸ್ಪರ್ಧಿ ಮಹೀಂದ್ರ ಮತ್ತು ಮಹೀಂದ್ರಾ ಕಾರುಗಳ ಮಾರಾಟವೂ ತೀವ್ರ ಏರಿಕೆಯು 28,053 ಯುನಿಟ್‌ಗಳಿಗೆ ತಲುಪಿದೆ. ಕಳೆದ ವರ್ಷಕ್ಕೆ ಮಹೇಂದ್ರ ಮಾರಾಟ ಶೇ. 33ರಷ್ಟು ಏರಿಕೆಯಾಗಿದೆ. ಮಹೀಂದ್ರಾದ ಎಸ್‌ಯುವಿಗಳಾದ ಎಕ್ಸ್‌ಯುವಿ700, ಥಾರ್, ಬೊಲೆರೊ ಮತ್ತು ಎಕ್ಸ್‌ಯುವಿ300ಗಳಿಗೆ ಬಲವಾದ ಬೇಡಿಕೆ ಕಂಡು ಬಂದಿದ್ದು ಈ ಮಾರಾಟ ಮೊತ್ತ ದಾಖಲಾಗಿದೆ. "ಪೂರೈಕೆ ಸರಪಳಿಯ ಪರಿಸ್ಥಿತಿಯು ಸಂಪೂರ್ಣವಾಗಿ ಸುಧಾರಿಸಿಲ್ಲ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ್ದೇವೆ" ಎಂದು ಮಹೀಂದ್ರಾದ ಅಧ್ಯಕ್ಷ ವೀಜಯ್ ನಕ್ರಾ ಹೇಳಿದ್ದಾರೆ.