ರಿಲಯನ್ಸ್‌ ಜಿಯೊದಿಂದ ಹೊರನಡೆದ ಮುಖೇಶ್‌ ಅಂಬಾನಿ; ಪುತ್ರ ಆಕಾಶ್‌ ಮುಖ್ಯಸ್ಥ!

ಬುಧವಾರ, 29 ಜೂನ್ 2022 (15:13 IST)

ರಿಲಯನ್ಸ್‌ ಜಿಯೋ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಮುಖೇಶ್‌ ಅಂಬಾನಿ ರಾಜೀನಾಮೆ ನೀಡಿ ಹೊರಗೆ ಬಂದಿದ್ದು, ಅವರ ಸ್ಥಾನಕ್ಕೆ ಪುತ್ರ ಆಕಾಶ್‌ ಅಂಬಾನಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಜೂನ್‌ ೨೭ರಿಂದ ಮುಖೇಶ್‌ ಅಂಬಾನಿ ರಾಜೀನಾಮೆ ಕಾರ್ಯ ರೂಪಕ್ಕೆ ಬರಲಿದ್ದು, ಪುತ್ರನಿಗೆ ಜಿಯೊ ಕಂಪನಿಯ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ.

ಷೇರು ಮಾರುಕಟ್ಟೆಗೆ ಮಂಗಳವಾರ ನೀಡಿದ ಮಾಹಿತಿ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಆಕಾಶ್‌ ಅಂಬಾನಿಯನ್ನು ಜಿಯೊ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಬೋರ್ಡ್‌ ಮೀಟಿಂಗ್‌ ನಲ್ಲಿ ತೀರ್ಮಾನ ಕೈಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ