ಷೇರು ಪೇಟೆ ಕುಸಿತ: 3 ದಿನಗಳ ಲಾಭಕ್ಕೆ ಬ್ರೇಕ್

ಸೋಮವಾರ, 11 ಜುಲೈ 2022 (20:42 IST)
ಕಳೆದ ಮೂರು ಸೆಷನ್‌ಗಳಲ್ಲಿ ಲಾಭವನ್ನು ಕಂಡಿದ್ದ ಷೇರು ಮಾರುಕಟ್ಟೆ ಈ ವಾರದ ವಹಿವಾಟಿನ ಆರಂಭದಲ್ಲೇ ಕೆಳಕ್ಕೆ ಕುಸಿದಿದೆ. ಸ್ಥಳೀಯ ಹಾಗೂ ಅಂತಾರಾಷ್ಟ್ರೀಯವಾಗಿ ಹಣದುಬ್ಬರವು ಹೂಡಿಕೆದಾರರ ಮೇಲೆ ಪರಿಣಾಮವನ್ನು ಉಂಟು ಮಾಡಿದೆ.ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು 372 ಅಂಕ ಕುಸಿತ ಕಂಡು 54,109. ಕ್ಕೆ ಇಳಿಕೆ ಕಂಡಿದೆ. ನಿಫ್ಟಿ ಸೂಚ್ಯಂಕವು ಸುಮಾರು ಶೇಕಡಾ 0.6ರಷ್ಟು ಕೆಳಕ್ಕೆ ಇಳಿದು 16,126.45 ಕ್ಕೆ ತಲುಪಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಭಾರೀ ಕೆಳಕ್ಕೆ ಕುಸಿದಿದೆ. ಡಿ-ಮಾರ್ಟ್ ಮಾಲೀಕತ್ವವನ್ನು ಹೊಂದಿರುವ ಸೂಪರ್‌ಮಾರ್ಟ್ಸ್ ಶೇಕಡಾ 2.9 ರಷ್ಟು ಜಿಗಿತ ಕಂಡಿದೆ. ಇನ್ನು ನಿಫ್ಟಿ 50 ಯಲ್ಲಿ ಭಾರ್ತಿ ಏರ್‌ಟೆಲ್, ಟಿಸಿಎಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ವಿಪ್ರೋ ಭಾರೀ ನಷ್ಟವನ್ನು ಕಂಡಿದ್ದರೆ, ಎನ್‌ಟಿಪಿಸಿ, ಎಂ & ಎಂ, ಒಎನ್‌ಜಿಸಿ, ಈಚರ್ ಮೋಟಾರ್ಸ್ ಮತ್ತು ಟಾಟಾ ಲಾಭವನ್ನು ಗಳಿಸಿದೆ.ಯುಎಸ್ ಡಾಲರ್ ಎದುರು ರೂಪಾಯಿ ಮತ್ತೆ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಯುಎಸ್ ಡಾಲರ್ ಎದುರು ರೂಪಾಯಿ 79.40ಕ್ಕೆ ಕುಸಿದಿದೆ. ರೂಪಾಯಿ ಮೌಲ್ಯ ಕುಸಿತವಾಗುತ್ತಿರುವ ನಡುವೆ ಆರ್‌ಬಿಐ ಮತ್ತೆ ತನ್ನ ವಿತ್ತ ನೀತಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ