Video: ಅಲ್ಲಾಹು ಅಕ್ಬರ್ ಎನ್ನುತ್ತಾ ದೇವಾಲಯಕ್ಕೆ ನುಗ್ಗಿ ವಿಗ್ರಹಕ್ಕೆ ಒದ್ದು ವಿಕೃತಿ: ಸ್ಥಳೀಯರಿಂದ ಸಿಕ್ತು ಧರ್ಮದೇಟು
ಆರೋಪಿಯನ್ನು ಕಬೀರ್ ಎಂದು ಗುರುತಿಸಲಾಗಿದೆ. ದೇವರ ಬೀಸನಹಳ್ಳಿಯ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಆರೋಪಿ ನುಗ್ಗಿದ್ದ. ಇಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಕಬೀರ್ ಈ ಕೃತ್ಯವೆಸಗಿದ್ದಾನೆ.
ನಿನ್ನೆ ಬೆಳಿಗ್ಗೆ ಸುಮಾರು 8.30 ಕ್ಕೆ ಘಟನೆ ನಡೆದಿದೆ. ಮೊದಲು ಅಲ್ಲಿಯೇ ಪಕ್ಕದಲ್ಲಿ ಮೆಡಿಕಲ್ ಸ್ಟೋರ್ ನಲ್ಲಿದ್ದ ಗಣಪತಿ ವಿಗ್ರಹಕ್ಕೆ ಕೋಲಿನಿಂದ ಹೊಡೆದಿದ್ದ. ಆಗ ಸ್ಥಳೀಯರು ಆಕ್ಷೇಪಿಸಿದ್ದರು. ಬಳಿಕ ತನ್ನ ಧರ್ಮದ ಪರ ಘೋಷಣೆ ಕೂಗುತ್ತಾ ನೇರವಾಗಿ ಗರ್ಭಗುಡಿಗೆ ನುಗ್ಗಿದ್ದಾನೆ.
ಚಪ್ಪಲಿ ಕಾಲಲ್ಲೇ ಗರ್ಭಗುಡಿಗೆ ನುಗ್ಗಿ ಅದೇ ಕಾಲಿನಲ್ಲಿ ದೇವರ ವಿಗ್ರಹಕ್ಕೆ ಒದ್ದಿದ್ದಾನೆ. ಈತನ ವಿಕೃತಿ ಕಂಡು ಆಕ್ರೋಶಗೊಂಡ ಸ್ಥಳೀಯರು ಆತನನ್ನು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಮಾರತಹಳ್ಳಿ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.