ನೂತನ ಐಟಿ ಪೋರ್ಟಲ್ ಅಭಿವೃದ್ಧಿಗೆ ಇಸ್ಫೋಸಿಸ್ಗೆ 165 ಕೋಟಿ ರೂ.!

ಮಂಗಳವಾರ, 27 ಜುಲೈ 2021 (14:10 IST)
ನವದೆಹಲಿ(ಜು.27): ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ ಇಸ್ಫೋಸಿಸ್ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್ವರೆಗೆ 164.5 ಕೋಟಿ ರು. ಸಂದಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

* ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್ ಪೋರ್ಟಲ್
* ಇಸ್ಫೋಸಿಸ್ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್ವರೆಗೆ 164.5 ಕೋಟಿ ರು. ಸಂದಾಯ
* ಲೋಕಸಭೆಗೆ ಲಿಖಿತ ಉತ್ತರ ನೀಡಿದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ

ಈ ಸಂಬಂಧ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ‘ಎಂಎಸ್ಪಿ, ಜಿಎಸ್ಟಿ, ಬಾಡಿಗೆ, ಪೋಸ್ಟೇಜ್ ಮತ್ತು ಮತ್ತು ಯೋಜನೆ ವ್ಯವಸ್ಥಾಪನೆಯ ವೆಚ್ಚಕ್ಕೆ ಸಂಬಂಧಿಸಿದ 4241.97 ಕೋಟಿ ರು. ವೆಚ್ಚದ ಸಮಗ್ರ ಇ-ಫೈಲಿಂಗ್ ಮತ್ತು ಸಿಪಿಸಿ-2.0 ಯೋಜನೆಯನ್ನು ಇಸ್ಫೋಸಿಸ್ಗೆ ವಹಿಸಲಾಗಿತ್ತು. ಈ ಪ್ರಕಾರ ಇದೇ ವರ್ಷದ ಜೂ.7ರಂದು ಕೇಂದ್ರ ಸರ್ಕಾರ ನೂತನ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ ಅನ್ನು ಲೋಕಾರ್ಪಣೆ ಮಾಡಿದೆ’ ಎಂದು ಹೇಳಿದರು.
ಇದರಲ್ಲಿ ಹಲವು ತಾಂತ್ರಿಕ ದೋಷಗಳ ಬಗ್ಗೆ ದೂರುಗಳು ಕೇಳಿಬಂದಿದ್ದು, ಪೋರ್ಟಲ್ನಲ್ಲಿ ಕಂಡುಬಂದ ತಾಂತ್ರಿಕ ದೋಷಗಳ ತ್ವರಿತ ಪರಿಹಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ