ಟಾಪ್ 5 ನೇಮಕಾತಿ ಕಂಪನಿಗಳು ಇಲ್ಲಿವೆ ನೋಡಿ

ಗುರುವಾರ, 15 ಡಿಸೆಂಬರ್ 2016 (07:58 IST)
ತಾಂತ್ರಿಕ ಶಿಕ್ಷಣದಲ್ಲಿ ಪ್ರಸಿದ್ಧಿ ಪಡೆದಿರುವ ಐಐಟಿ ಮುಂಬೈನಲ್ಲಿ ಅತಿಹೆಚ್ಚು ನೇಮಕಾತಿ ಮಾಡಿಕೊಂಡಿರುವ ಟಾಪ್ 5 ಕಂಪನಿಗಳು ವಿವರ ಹೀಗಿದೆ. ಮುಖ್ಯವಾಗಿ ಇಂಟೆಲ್ ಟೆಕ್ನಾಲಜೀಸ್ 29 ಮಂದಿ ವಿದ್ಯಾರ್ಥಿಗಳನ್ನು, ಸ್ಯಾಂಸಂಗ್ ಆರ್ ಅಂಡ್ ಡಿ 28 ಮಂದಿ, ಸಿಟಿ ಕಾರ್ಪೊರೇಷನ್ 20 ಮಂದಿ, ಗೋಲ್ಡ್‌ಮನ್ ಸಾಚ್ಸ್ 15, ಕ್ವಾಲ್ಕಮ್ 13 ಮಂದಿ ಐಐಟಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿವೆ.
 
ಅದೇ ರೀತಿ ಅಂತಾರಾಷ್ಟ್ರೀಯ ಉದ್ಯೋಗವಕಾಶಗಳಲ್ಲಿ ಅತಿ ದೊಡ್ಡ ನೇಮಕಾತಿಯನ್ನು ಯಾಹೂ, ಎನ್‌ಇಸಿ, ಮುರತ, ಮೈಕ್ರೋಸಾಫ್ಟ್ ಕಂಪನಿಗಳಿವೆ ಎಂದು ಐಐಐ ಮುಂಬೈ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
 
ಅಮೆರಿಕಾ ಕಂಪನಿಗಳು ನೀಡಲಿರುವ ಅತ್ಯಧಿಕ ಪ್ಯಾಕೇಜ್‌ಗಳು ಊಬರ್ 110,000 ಡಾಲರ್, ಮೈಕ್ರೋಸಾಫ್ಟ್ 106,000 ಡಾಲರ್, ಒರಾಕಿಲ್ 100,000 ಡಾಲರ್‌ಗಳಷ್ಟಿದೆ. ಜಪಾನ್ ಕಂಪನಿಗಳಲ್ಲಿ ವಾರ್ಷಿಕ ರೂ. 60 ಲಕ್ಷ, ಯಾಹೂ 37.25 ಲಕ್ಷ, ರಾಕುಟೇನ್ ರೂ. 37.20 ಲಕ್ಷ, ಟೋಯೊ ಇಂಜಿನಿಯರಿಂಗ್ ರೂ.35.16 ಲಕ್ಷ ನೀಡುತ್ತಿವೆ. ದೇಶೀಹ ಕಂಪನಿಗಳ ಗರಿಷ್ಠ ವೇತನ ಬ್ಲಾಕ್ ಸ್ಟೋನ್ ರೂ. 35 ಲಕ್ಷ, ಸ್ಕ್ಲೂಮ್‌ಬರ್ಗರ್ ರೂ.28 ಲಕ್ಷ, ವರ್ಲ್ಡ್ ಕ್ವಾಂಟ್ ರೂ.25.2 ಲಕ್ಷ, ಜೆರಾಕ್ಸ್ ರಿಸೇರ್ಚ್ ರೂ. 22 ಲಕ್ಷಗಳಷ್ಟಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ