ವಾಹನಗಳ ವಿಮಾ ಕಂತು ಶೇ.50 ರಷ್ಟು ಹೆಚ್ಚಳ ಸಾಧ್ಯತೆ

ಸೋಮವಾರ, 6 ಮಾರ್ಚ್ 2017 (08:54 IST)
ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ಶೇ.50ರಷ್ಟು ಹೆಚ್ಚಾಗಲಿದೆ ಎಂಬ ಸುದ್ದಿ ಈಗ ವಾಹನ ಮಾಲೀಕರಿಗೆ ಶಾಕ್‍ ನೀಡಿದೆ. ಕಾರು, ಮೋಟಾರ್ ಸೈಕಲ್‌ಗಳ ವಿಮಾ ಕಂತನ್ನು ಶೇ.50ರಷ್ಟು ಹೆಚ್ಚಿಸಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಪ್ರಸ್ತಾಪನೆ ಮಾಡಿದೆ. 
 
ಈ ಹಿನ್ನೆಲೆಯಲ್ಲಿ ಪ್ರೀಮಿಯಂ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ 1000 ಸಿಸಿ ತನಕ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವನೆ ಇಲ್ಲ. ಈಗ ರೂ.2,055ರಷ್ಟಿದ್ದು ಅದೇ ಮುಂದುವರೆಯುವ ಸಾಧ್ಯತೆಗಳಿವೆ. 
 
ಥರ್ಡ್ ಪಾರ್ಟಿ ವಿಮಾ ಕಂತನ್ನು ಸುಮಾರು ಶೇ.50ರಷ್ಟು ಹೆಚ್ಚಳ ಮಾಡುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ 6 ಎಚ್‌ಪಿವರೆಗಿನ ಟ್ರ್ಯಾಕ್ಟರ್ ವಿಮಾ ಕಂತು ರೂ.510ರಿಂದ 765ಕ್ಕೆ ಏರಿಸಲು, ವಿಂಟೇಜ್ ಕಾರುಗಳಿಗೆ ಶೇ.25ರಷ್ಟು ರಿಯಾಯಿತಿ ನೀಡಲು ಸೂಚಿಸಲಾಗಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ