ನವದೆಹಲಿ: ಪ್ರಮುಖ ಟೆಲಿಕಾಂ ಕಂಪನಿ ಏರ್ ಟೆಲ್ ತನ್ನ ಗ್ರಾಹಕರ ಗೌಪ್ಯ ಮಾಹಿತಿಯನ್ನೇ ಕದ್ದು ಮಾರಾಟ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳಿಗೆ ಈಗ ಸ್ವತಃ ಭಾರ್ತಿ ಏರ್ ಟೆಲ್ ಸಂಸ್ಥೆ ಸ್ಪಷ್ಟನೆ ನೀಡಿದೆ.
ಏರ್ ಟೆಲ್ ಸಂಸ್ಥೆ ತನ್ನ ಗ್ರಾಹಕರ ಆಧಾರ್ ವಿವರ, ಫೋನ್ ನಂಬರ್ ಸೇರಿದಂತೆ ಅನೇಕ ಗೌಪ್ಯ ಮಾಹಿತಿಗಳನ್ನು ಕದ್ದು ಮಾರಾಟ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಗ್ರಾಹಕರಿಂದ ತೀವ್ರ ಆಕ್ರೋಶ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಂಸ್ಥೆ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು, ಆರೋಪ ನಿರಾಕರಿಸಿದೆ.
ಏರ್ ಟೆಲ್ ನ 37.5 ಕೋಟಿಗೂ ಅಧಿಕ ಗ್ರಾಹಕರ ದತ್ತಾಂಶವನ್ನು ಹ್ಯಾಕ್ ಮಾಡಿದೆ. ಡಾರ್ಕ್ ವೆಬ್ ವೇದಿಕೆಯಲ್ಲಿ ಕ್ವೆನ್ ಜೆನ್ ಹೆಸರಿನ ಖಾತೆಯಡಿ ಬಳಕೆದಾರರ ಮೊಬೈಲ್ ನಂಬರ್, ಆಧಾರ್ ವಿವರ, ಈಮೇಲ್ ವಿಳಾಸ ಸೇರಿದಂತೆ ಗೌಪ್ಯವಾಗಿಡಬೇಕಾದ ಮಾಹಿತಿಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ನಿಯಮಗಳಿಗೆ ವಿರುದ್ಧವಾಗಿದೆ.
ಇದಕ್ಕೆ ಈಗ ಸ್ಪಷ್ಟನೆ ನೀಡಿರುವ ಭಾರ್ತಿ ಏರ್ ಟೆಲ್ ಸಂಸ್ಥೆ ಕೆಲವರು ಕಂಪನಿಯ ಬ್ರ್ಯಾಂಡ್ ಗೆ ಕಳಂಕ ತರುವ ಉದ್ದೇಶದಿಂದ ಇಂತಹ ಆರೋಪ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗಿದ್ದು, ಯಾವುದೇ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದೆಲ್ಲಾ ಸತ್ಯಕ್ಕೆ ದೂರವಾದುದು ಎಂದಿದೆ.