ದೀಪಾವಳಿ ನಂತರ ಮತ್ತೆ ಜಿಯೋ ಫೋನ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್

ಸೋಮವಾರ, 16 ಅಕ್ಟೋಬರ್ 2017 (08:42 IST)
ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಬುಕಿಂಗ್ ಮಾಡಬೇಕೆಂದಿದ್ದ ಗ್ರಾಹಕರು ಇತ್ತೀಚೆಗೆ ವೆಬ್ ಸೈಟ್ ಹ್ಯಾಕ್ ಆಗಿ ನಿರಾಸೆ ಅನುಭವಿಸಿದ್ದರು. ಸ್ಥಗಿತಗೊಂಡಿದ್ದ ಬುಕಿಂಗ್ ಇದೀಗ ದೀಪಾವಳಿ ನಂತರ ಮತ್ತೆ ಪ್ರಾರಂಭವಾಗಲಿದೆ.


ಆಗಸ್ಟ್ ನಲ್ಲಿ ಸುಮಾರ ಆರು ಮಿಲಿಯನ್ ಫೋನ್ ಬುಕಿಂಗ್ ಆಗಿತ್ತು. ಆಗಸ್ಟ್ ನಲ್ಲಿ ಮೊದಲ ಹಂತದ ಬುಕಿಂಗ್ ನಡೆದಿತ್ತು. ಇದೀಗ ಎರಡನೇ ಹಂತ ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವಂಬರ್ ಆರಂಭದಲ್ಲಿ ಪ್ರಾರಂಭವಾಗಲಿದೆ.

ರಿಲಯನ್ಸ್ ಜಿಯೋ ಜತೆಗೆ ಏರ್ ಟೆಲ್ ಕೂಡಾ ದೀಪಾವಳಿ ನಂತರ ಅಗ್ಗದ 4 ಜಿ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಹೀಗಾಗಿ ಎರಡು ದೈತ್ಯ ಕಂಪನಿಗಳ ನಡುವೆ ಪ್ರಬಲ ಪೈಪೋಟಿ ನಡೆಯುವುದು ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ