ಏರ್ಟೆಲ್, ವೊಡಾಫೋನ್ ಗಳಿಗೆ ಟಕ್ಕರ್ ನೀಡಲು ಜಿಯೋ ಬಿಡುಗಡೆ ಮಾಡಿದೆ ಈ ಯೋಜನೆ

ಗುರುವಾರ, 24 ಅಕ್ಟೋಬರ್ 2019 (08:52 IST)
ನವದೆಹಲಿ : ಏರ್ಟೆಲ್ ಹಾಗೂ ವೊಡಾಫೋನ್ ಗಳಿಗೆ ಟಕ್ಕರ್ ನೀಡಲು ಜಿಯೋ 222 ರೂ. ಗಳ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.ಜಿಯೋ 222 ರೂ. ಗಳ ಈ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಜಿಯೋ-ಟು-ಜಿಯೋ ಕರೆಗಳು ಹಾಗೂ ಇತರ ನೆಟ್ ವರ್ಕ್ ಗಳಿಗೆ 1000ನಿಮಿಷ ಉಚಿತ ಕರೆ ಸೌಲಭ್ಯ ನೀಡುತ್ತಿದೆ. ಹಾಗೇ ಪ್ರತಿದಿನ 2 ಜಿಬಿ 4ಜಿ ಡೇಟಾ ಸಿಗಲಿದೆ. ಅಲ್ಲದೇ ಅನಿಯಮಿತ ಎಸ್ ಎಂಎಸ್ ಗಳನ್ನು ನೀಡಲಾಗುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದರಲ್ಲಿ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಸೇರಿ ಜಿಯೋದ ಎಲ್ಲಾ ಅಪ್ಲಿಕೇಶನ್ ಗಳು ಉಚಿತವಾಗಿ ಸಿಗಲಿವೆ.

 

ಜಿಯೋ 222 ರೂ. ಗಳ ಏರ್ಟೆಲ್ ನ 249 ರೂ, ಪ್ಲಾನ್ ಹಾಗೂ ವೊಡಾಫೋನ್ ನ 229 ರೂ. ಪ್ಲಾನ್ ಗೆ ಟಕ್ಕರ್ ನೀಡಲಿದೆ ಎನ್ನಲಾಗಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ