ಹೊಸ ಲುಕ್‌ನೊಂದಿಗೆ ಕೆಟಿಎಮ್ ಡ್ಯೂಕ್ 390

ಗುರುಮೂರ್ತಿ

ಸೋಮವಾರ, 29 ಜನವರಿ 2018 (17:20 IST)
ವಿಭಿನ್ನವಾದ ಸೌಂಡ್ ಜೊತೆಗೆ ಟ್ರೆಂಡಿ ಸ್ಪೋರ್ಟ್ಸ್ ಲುಕ್, ಆಕರ್ಷಕ ಬಣ್ಣ ಹಾಗೂ ಸ್ಪೀಡ್‌ನಿಂದ ಜನಪ್ರಿಯವಾಗಿರುವ ಕೇಟಿಎಮ್ ಬೈಕ್ ತಯಾರಿಕಾ ಸಂಸ್ಥೆ ತನ್ನ ಗ್ರಾಹಕರಿಗಾಗಿ 2018ನೇ ಸಾಲಿನ ಹೊಸ ಕೇಟಿಎಮ್ ಡ್ಯೂಕ್ ಆವೃತ್ತಿಯ 390 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಇದರ ಆವೃತ್ತಿಯಾದ ಡ್ಯೂಕ್ 200, ಡ್ಯೂಕ್ 250 ಮತ್ತು ಸೆಕೆಂಡ್ ಜನರೇಷನ್ 390 ಲಭ್ಯವಿದ್ದು ಅದರ ಯಶಸ್ಸಿನ ನಂತರ ಕಂಪನಿ ತನ್ನ ನೂತನ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಳೆಯ ಮಾದರಿಗಿಂತಲೂ ವಿಭಿನ್ನವಾಗಿರುವ ಈ ಹೊಸ ಆವೃತ್ತಿಯು ಮತ್ತೆ ಸಾಹಿಸಿ ಬೈಕ್ ಪ್ರಿಯರ ಮನಸೆಳೆಯಲು ಸಜ್ಜಾಗಿದೆ. ಈ ಬೈಕ್ ಹೇಗಿದೆ ಅದರ ದರ, ವೈಶಿಷ್ಟ್ಯಗಳೇನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯುವ ಕೂತುಹಲವಿದ್ದಲ್ಲಿ ಈ ವರದಿಯನ್ನು ಓದಿ.
 
2018ನೇ ಸಾಲಿನ ನೂತನ ಕೇಟಿಎಮ್ ಡ್ಯೂಕ್ ಆವೃತ್ತಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹೊಸ ಬಗೆಯ ವಿನ್ಯಾಸ ಮತ್ತು ಒಣ್ಣಗಳನ್ನು ಇದು ಹೊಂದಿದೆ. ದೆಹಲಿ ಎಕ್ಸ್‌ಶೋರಂನ ಪ್ರಕಾರ ಇದರ ಬೆಲೆಯು ರೂ. 2.29 ಲಕ್ಷವಾಗಿದ್ದು, 2017ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ಸೆಕೆಂಡ್ ಜನರೇಷನ್ ಡ್ಯೂಕ್ 390 ಗೆ ಹೋಲಿಸಿದರೆ ಈ ಬೈಕ್ ತುಂಬಾ ಆಕರ್ಷಕವಾಗಿದೆ.
 
ಈ ಬೈಕ್‌ನಲ್ಲಿ ಟಿಎಫ್‌ಟಿ ಇನ್‌ಸ್ಟ್ರೂಮೆಂಟ್ ಡಿಸ್‌ಫ್ಲೇ ನೀಡಲಾಗಿದ್ದು, ಹಿಂದಿನ ಆವತ್ತಿಯ ಬೈಕ್‌ಗಳಲ್ಲಿ ಕಂಡುಬಂದಿದ್ದ ಎಂಜಿನ್ ಹಿಟ್ ಮತ್ತು ಹೆಡ್ ಲೈಟ್ ವಿಭಾಗದಲ್ಲಿನ ತಾಂತ್ರಿಕ ದೋಷಗಳನ್ನು ಹೊಸ ಮಾದರಿ ಬೈಕ್‌ನಲ್ಲಿ ಸರಿಪಡಿಸಲಾಗಿದೆ. ಅಲ್ಲದೇ ಈ ಬೈಕ್‌ನಲ್ಲಿ ಸ್ಮಾರ್ಟ್ ಫೋನ್‌ಗಳ ಮೂಲಕ ನೇವಿಗೆಷನ್ ಅನ್ನು ಟ್ರಾಕ್ ಮಾಡಬಹುದಾದ ಸೌಲಭ್ಯವನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.
 
ಎಂಜಿನ್ ಸಾಮರ್ಥ್ಯ
2018ರ ಡ್ಯೂಕ್ 390 ಬೈಕ್‌ಗಳು ಈ ಹಿಂದಿನ ಆವೃತ್ತಿಯಂತೆಯೇ 373.2-ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದ್ದು, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 44-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಈ ಬೈಕ್‌ನಲ್ಲಿ ಸುರಕ್ಷತೆಗೆ ಸಹ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ಚಕ್ರವು 320ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರವು 230ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರಲ್ಲಿ ABS ಸಿಸ್ಟಂ ತಂತ್ರಜ್ಞಾನವನ್ನು ಕೂಡಾ ಅಳವಡಿಸಲಾಗಿದೆ.
ಅಲ್ಲದೇ ಇದರ ಹೊರವಿನ್ಯಾಸ ತುಂಬಾನೇ ಆಕರ್ಷಕವಾಗಿದ್ದು, ಚುಪಾಗಿರುವ ಹೆಡ್‌ಲ್ಯಾಂಪ್ ಜೊತೆಗೆ ಎಲ್‌ಇಡಿ ಲೈಟಿಂಗ್ ಅನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿರುವ ಟೈಲ್ ಲೈಟ್‌ಗಳು ಬೈಕ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ.
 
ಒಟ್ಟಿನಲ್ಲಿ ಈ ಬೈಕ್ ತನ್ನ ಹಳೆಯ ಮಾದರಿಯ 390 ಆವೃತ್ತಿಗಿಂತಲೂ ವಿಭಿನ್ನವಾಗಿದ್ದು ಹಲವು ಬಣ್ಣ ಮತ್ತು ಆಕರ್ಷಕ ಗ್ರಾಫಿಕ್ಸ್‌ನಿಂದ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ