ಇನ್ನುಮುಂದೆ ಬಿಗ್ ಬಾಸ್ಕೆಟ್ ನಲ್ಲೂ ಸಿಗಲಿದೆಯಂತೆ ಹಾಲು

ಸೋಮವಾರ, 22 ಅಕ್ಟೋಬರ್ 2018 (12:02 IST)
ಬೆಂಗಳೂರು : ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಝಾನ್ ಹಾಗೂ ಫ್ಲಿಕ್ ಕಾರ್ಟ್ ಭಾರತದಲ್ಲಿ ದಿನಸಿ ಸಾಮಾನುಗಳ ಪೂರೈಕೆಗೆ ತೊಡಗಿದ್ದರಿಂದ ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆ ಬಿಗ್ ಬಾಸ್ಕೆಟ್ ಇದೀಗ ತಮ್ಮ ಗ್ರಾಹಕರಿಗೆ ಹಾಲನ್ನೂ ಪೂರೈಕೆ ಮಾಡುವ ನಿರ್ಧಾರ ಮಾಡಿದೆ.

ಹಿಂದಿನ ರಾತ್ರಿ ಹಾಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಸಲ್ಲಿಸಿದರೆ, ಬೆಳಗ್ಗೆ ನೀವು ಹಾಲನ್ನು ಪಡೆಯಬಹುದು. ಕ್ವಿಕ್ 24 ಎಂಬ ಸ್ವಾರ್ಟ್ ಅಪ್ ಸೇವೆಯನ್ನು ಇದಕ್ಕಾಗಿ ಪ್ರಾರಂಭಿಸಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಬೇಕೆಂದಾಗ ಹಾಲು ಪಡೆಯಲು ಆಯ್ದ ಸ್ಥಳಗಳಲ್ಲಿ ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಸಹ ಅಳವಡಿಸಲಿದೆ.

 

ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ಮತ್ತು ಪುಣೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತಂದು ನಂತರ ಹಂತ ಹಂತವಾಗಿ ಇತರೆ ನಗರಗಳಿಗೂ ವಿಸ್ತರಿಸುವ ಪ್ಲಾನ್ ಇದರದಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ 100 ಸ್ಮಾರ್ಟ್ ವೆಂಡಿಂಗ್ ಮೆಷಿನ್ ಗಳನ್ನು ಅಳವಡಿಸಿಯಾಗಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ. ಬೆಂಗಳೂರು ಮತ್ತು ಪುಣೆಗಳಲ್ಲಿ 20 ಸಾವಿರಕ್ಕೂ ಅಧಿಕ ಗ್ರಾಹಕರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ