ಯುವಕರಿಗೆ ಹೊಸ ಅವಕಾಶ ನೀಡಲಿರುವ ಸ್ಟಾರ್ಟ್ ಆಫ್ ಇಂಡಿಯಾ: ಮೋದಿ

ಶುಕ್ರವಾರ, 15 ಡಿಸೆಂಬರ್ 2023 (10:27 IST)
ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತರನ್ನು ಜೋಡಿಸುತ್ತದೆ. ದೇಶದ ಯುವಕರಿಗೆ ಹೊಸ ಅವಕಾಶ ನೀಡಲಿದೆ.ಎಂದು ಮೋದಿ ತಿಳಿಸಿದ್ದಾರೆ.
 
 ಉತ್ಪಾದನೆ, ಕೃಷಿ, ಕ್ಷೇತ್ರಗಳು ಸೇರಿದಂತೆ ಎಲ್ಲಾ ವಲಯಗಳಿಗೂ ಸಹಕಾರಿಯಾಗಲಿವೆ. ದೇಶದಲ್ಲಿ ಸ್ಥಳೀಯ ಮಟ್ಟದಲ್ಲಿ ಉದ್ದಿಮೆ ಸ್ಥಾಪನೆಗೆ ಪ್ರೇರೇಪಿಸುವ ದೃಷ್ಟಿಯಿಂದ ‘ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟ್ಯಾಂಡ್‌ ಅಪ್‌ ಇಂಡಿಯಾ’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು 
 
ಭಾರತ ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಯಾಗಬೇಕು ಎಂದು ಪ್ರಧಾನಿ ಮೋದಿ ತಮ್ಮ ಮಹಾತ್ವಾಕಾಂಕ್ಷೆಯನ್ನು ಹೊರಹಾಕಿದ್ದಾರೆ.ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು  ಸರ್ಕಾರ ಸ್ಟಾರ್ಟ್- ಅಪ್ಸ್  ನೀಲ ನಕ್ಷೆಯನ್ನು ಅನಾವರಣಗೊಳಿಸಲಿದೆ ಎಂದು ಹೇಳಿದ್ದಾರೆ.
 
ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ನಿಂತು ಮಾತನಾಡುವಾಗ ಭಾರತ ಸ್ಟಾರ್ಟ್ - ಅಪ್ ಗಮ್ಯ ಸ್ಥಾನವಾಗುತ್ತದೆ ಎಂದು ಹೇಳಿದ್ದೆ.ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ನಾವು ಅನಾವರಣಗೊಳಿಸುತ್ತೇವೆ ಎಂದಿದ್ದಾರೆ ಪ್ರಧಾನಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ