ಕೈಗೆಟುಕುವ ದರಕ್ಕೆ ಮೊಬೈಲ್ ಬಿಡುಗಡೆಮಾಡಿದ ಇಂಟೆಕ್ಸ್

ಗುರುಮೂರ್ತಿ

ಮಂಗಳವಾರ, 13 ಫೆಬ್ರವರಿ 2018 (16:31 IST)
ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆಯಾದ ಇಂಟೆಕ್ಸ್ ತನ್ನ ಗ್ರಾಹಕರಿಗೊಸ್ಕರ ಕೈಗೆಟುಕುವ ದರದಲ್ಲಿ ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿ ಈ ಮೊಬೈಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ತಯಾರಾಗುವ ಮೊಬೈಲ್‌ಗಳಲ್ಲಿ ಹೆಚ್ಚು ಮಾರಾಟವಾಗುವ ಮೊಬೈಲ್‌ ಇಂಟೆಕ್ಸ್ ಆಗಿದ್ದು ದೇಶದಲ್ಲಿಯೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸವನ್ನು ಗೆದ್ದಿರುವ ಇಂಟೆಕ್ಸ್ ತನ್ನ ಗ್ರಾಹಕರಿಗಾಗಿ ನೂತನ ಫೋನ್ ಕೇವಲ 3899 ಕ್ಕೆ ಪರಿಚಯಿಸಿದ್ದು. ಈ ಫೋನ್‌ನ ಹೊರವಿನ್ಯಾಸವು ಅತ್ಯಂತ ಅತ್ಯಾಕರ್ಷಕವಾಗಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದ್ದು, ಈ ಫೋನ್‌ Android 7 ನೌಗಾಟ್ ಆಫರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ 5 ಇಂಚಿನ FWVGA 2.5D ಪರದೆ ಮತ್ತು 4G ವೋಲ್ಟ್ ಸೌಲಭ್ಯವನ್ನು ಹೊಂದಿದೆ. ಅಲ್ಲದೇ 1 GB RAM ಜೊತೆಗೆ ಕ್ವಾಡ್-ಕೋರ್ 64-ಬಿಟ್ ಮೀಡಿಯಾ ಟೆಕ್ ಚಿಪ್ಸೆಟ್ ಈ ಮೊಬೈಲ್‌ನಲ್ಲಿರುವು ವಿಶೇಷವಾಗಿದೆ. ಅಲ್ಲದೇ 8 GB ಆಂತರಿಕ ಸಂಗ್ರಹಣೆಯನ್ನು ಈ ಮೊಬೈಲ್ ಹೊಂದಿದ್ದು, ಮೆಮೋರಿ ಕಾರ್ಡ್ ಅನ್ನು ಬಳಸುವ ಮೂಲಕ 64GB ವರೆಗೂ ವಿಸ್ತರಿಸಬಹುದಾಗಿದೆ.
ಈ ಫೋನ್‌ನಲ್ಲಿ ಡ್ಯೂಯಲ್ ಸಿಮ್ ಆಯ್ಕೆಗಳಿವೆ. ಅಷ್ಟೇ ಅಲ್ಲ ಹಿಂಭಾಗದಲ್ಲಿ ಎಲ್‌ಇಡಿ ಫ್ಲಾಶ್ ಜೊತೆಗೆ 5 ಮೆಗಾಪಿಕ್ಸೆಲ್ ಕ್ಯಾಮರಾವಿದ್ದು, ಆಟೋ ಫೋಕಸ್ ತಂತ್ರಜ್ಞಾನವನ್ನು ಹೊಂದಿದೆ. ಈ ಮೂಲಕ ಉತ್ತಮ ಗುಣಮಟ್ಟದ ಪೋಟೋಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ ಮತ್ತು ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, ಅದರ ಮೂಲಕ ಕಡಿಮೆ ಬೆಳಕಿನಲ್ಲೂ ಸಹ ಉತ್ತಮ ಗುಣಮಟ್ಟದ ಚಿತ್ರಗಳನ್ನು ನಾವು ತೆಗೆಯಬಹುದಾಗಿದೆ.
 
ವೈಫೈ, ಎಫ್‌ಎಮ್, ಬ್ಲೂಟೂತ್, ಜಿಪಿಎಸ್ ಕೂಡಾ ಇದ್ದು, 2200mAh ಬ್ಯಾಟರಿಯನ್ನು ಈ ಫೋನ್‌ನಲ್ಲಿ ಅಳವಡಿಸಲಾಗಿದೆ. ಇದು ರಾಯಲ್ ಬ್ಲಾಕ್‌, ಸ್ಟೀಲ್ ಗ್ರೇ ಮತ್ತು ಷಾಂಪೇನ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದ್ದು, ಇದರಲ್ಲಿ ಇಂಟೆಕ್ಸ್ ವಾಲ್ಯೂ ಎಡೆಡ್ ಸೇವೆಗಳನ್ನು ಸಹ ನೀವು ಪಡೆಯಬಹುದಾಗಿದೆ ಮತ್ತು ದೇಶಿಯ 21 ಭಾಷೆಗಳನ್ನು ಈ ಫೋನ್‌ನಲ್ಲಿ ಅಳವಡಿಸಲಾಗಿದ್ದು ಸುಲಭವಾಗಿ ನಿಮ್ಮ ಇಷ್ಟದ ಭಾಷೆಗಳಲ್ಲಿ ಈ ಫೋನ್ ಅನ್ನು ಬಳಸಬಹುದಾಗಿದೆ. ಮೂಲಗಳ ಪ್ರಕಾರ ಈ ಮೊಬೈಲ್‌ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ