ನಾಳೆ ಲಾಂಚ್ ಆಗಲಿದೆ ಶಿಯೋಮಿಯ ಹೊಸ ಫೋನ್...! ಹೇಗಿದೆ ಗೊತ್ತಾ...!

ಗುರುಮೂರ್ತಿ

ಮಂಗಳವಾರ, 13 ಫೆಬ್ರವರಿ 2018 (16:09 IST)
ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಮಾಡಿ ಖ್ಯಾತಿ ಹೊಂದಿರುವ ಶಿಯೋಮಿ ನಾಳೆ ತನ್ನ ನೂತನ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದು ಹೇಗಿದೆ ಅದರ ವೈಶಿಷ್ಟ್ಯತೆಗಳು ಏನೆಂಬುದನ್ನು ತಿಳಿಯುವ ಕೂತುಹಲವೇ ಇಲ್ಲಿದೆ ವಿವರ.
ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಫೋನ್‌ಗಳನ್ನು ಕಡಿಮೆ ಬೆಲೆಗೆ ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಶಿಯೋಮಿ, ಇತ್ತೀಚಿನ ಟ್ರೆಂಟ್‌ಗೆ ತಕ್ಕಹಾಗೇ ಹೊಸ ತಂತ್ರಜ್ಞಾನದೊಂದಿಗೆ ತನ್ನ ನೂತನ ಫೋನ್ ಆದ ಶಿಯೋಮಿ ರೆಡ್ ಮೀ ನೋಟ್ 5 ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ನೋಟ್ 5 ನ ಚಿತ್ರಗಳು ಸೋರಿಕೆ ಆಗಿದ್ದು ಮಾರುಕಟ್ಟೆಯಲ್ಲಿ ಈ ಮೊಬೈಲ್ ನಾಳೆಯಿಂದ ಸದ್ದು ಮಾಡಲಿದೆ.
 
ಮೂಲಗಳ ಪ್ರಕಾರ ಕಂಪನಿ ನಾಳೆ 11.30 ಕ್ಕೆ ಪತ್ರಿಕಾಗೋಷ್ಟಿಯನ್ನು ಕರೆದಿದ್ದು, 12 ಗಂಟೆಯ ಆಸುಪಾಸಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಇದರ ಮಾಹಿತಿಗಳು ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿದ್ದು ಅವುಗಳ ಕುರಿತಾದ ವಿವರಗಳು ಇಲ್ಲಿವೆ.
 
ಶಿಯೋಮಿ ರೆಡ್ ಮಿ ನೋಟ್ 5 ಮೊಬೈಲ್‌ನ ಹೊರ ವಿನ್ಯಾಸವು ಆಕರ್ಷಕವಾಗಿದ್ದು, ಹಳೆಯ ನೋಟ್‌ 4 ಗೆ ಹೋಲಿಸಿದರೆ ತುಂಬಾ ಬದಲಾವಣೆಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ. ಈ ಮೊಬೈಲ್‌ 5.99 ಇಂಚು ಅಗಲದ ಪೂರ್ಣ ಎಚ್‌ಡಿ (1080x2160 ಪಿಕ್ಸೆಲ್) ಪರದೆಯನ್ನು ಹೊಂದಿದ್ದು, ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ನೋಟ್ 5 ಅನ್ನು ಎರಡು ರೀತಿಯಲ್ಲಿ ರೂಪಾಂತರಿಸಲಾಗಿದ್ದು ಮೊದಲನೆಯದು 3GB RAM ಮತ್ತು 32 GB ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದರೆ, ಎರಡನೆಯದು 4 GB RAM ಹಾಗೂ 64 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಅಲ್ಲದೇ ಇವೆರಡು ಫೋನ್‌ಗಳ ಸಂಗ್ರಹಣೆಯನ್ನು 256 GB ವರೆಗೆ ವಿಸ್ತರಿಸಬಹುದಾಗಿದೆ.
 
ಈ ಮೊಬೈಲ್‌ನ ಮುಂಬದಿಯ ಕ್ಯಾಮರಾವು 8 ಮೆಗಾಫಿಕ್ಸೆಲ್‌ ಆಗಿದ್ದು, ಹಿಂಬದಿಯಲ್ಲಿ 16 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. ಈ ಮೂಲಕ ಉತ್ತಮವಾದ ಫೋಟೋವನ್ನು ಕ್ಲಿಕ್ಕಿಸಲು ಈ ಫೋನ್ ನಿಮಗೆ ಸಹಾಯಕವಾಗಲಿದೆ. ಅದಲ್ಲದೇ ಹಿಂಬದಿಯಲ್ಲಿ ಫ್ಲಾಶ್ ಲೈಟ್ ಅನ್ನು ಇದು ಹೊಂದಿದ್ದು, ಹಿಂಬದಿ ಕ್ಯಾಮರಾದಲ್ಲಿ ಡ್ಯುಯಲ್ ಕ್ಯಾಮರಾ ಸಂವೇದಕವನ್ನು ನಾವು ಕಾಣಬಹುದಾಗಿದೆ ಮತ್ತು ಈ ಕ್ಯಾಮರಾಗಳ ಮೂಲಕ 1080P ನಲ್ಲಿ ವೀಡಿಯೊ ರೆಕಾರ್ಡಿಂಗ್‌ ಅನ್ನು ಕೂಡಾ ಮಾಡಬಹುದಾಗಿದೆ.
 
ಈ ಮೊಬೈಲ್‌ನಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ ಎನ್ನುವ ವದಂತಿಗಳು ಕೇಳಿಬರುತ್ತಿದ್ದು ಇದುವರೆಗೂ ಅದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದರಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕೂಡಾ ಇದ್ದು, ವೈಫೈ, ಜಿಪಿಎಸ್, ಬ್ಲೂಟೂತ್ ಅನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಪ್ರೊಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ನಾವು ಇದರಲ್ಲಿ ನಿರೀಕ್ಷಿಸಬಹುದಾಗಿದೆ.
 
ಬೆಲೆಗಳ ಕುರಿತಾಗಿ ಹೇಳುವುದಾದರೆ ಶಿಯೋಮಿ ಮೊದಲಿನಿಂದಲೂ ತನ್ನ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ.ಮೂಲಗಳ ಪ್ರಕಾರ ಇದರ ಬೆಲೆಯು 15,400 ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ವಾರದಿಂದ ಆನ್‌ಲೈನ್‌ಗಳಲ್ಲಿ ಈ ಮೊಬೈಲ್ ಲಭ್ಯವಿದ್ದು ನಂತರದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ