ರೂ. 8,000 ಕೋಟಿ ಕಳೆದುಕೊಂಡ ಅಂಬಾನಿ

ಬುಧವಾರ, 15 ಫೆಬ್ರವರಿ 2017 (12:30 IST)
ದೂರಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಕಂಪೆನಿಗಳ ಆದಾಯಕ್ಕೆ ಭಾರಿ ಹೊಡೆತ ನೀಡಿತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಗೆ ಭಾರಿ ಶಾಕ್ ಅನುಭವಿಸಿದ್ದಾರೆ. ತನ್ನ ಮುಖ್ಯ ಕಂಪೆನಿ ರಿಲಯನ್ಸ್ ಗ್ಯಾಸ್ ಅಂಡ್ ಟ್ರಾನ್ಸ್‌ಪೋರ್ಟೇಷನ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಆರ್‌ಜಿಟಿಐಎಲ್) 2016ರ ಸೆಪ್ಟೆಂಬರ್‍ ವರೆಗೆ ರೂ.8000 ಕೋಟಿ ನಿಖರ ಆದಾಯವನ್ನು ಕಳೆದುಕೊಂಡಿದೆ.
 
ಕೃಷ್ಣ ಗೋದಾವರಿ (ಕೆಜಿ) ಕೊಳ್ಳದಿಂದ ಕಡಿಮೆ ಗ್ಯಾಸ್ ಸರಬರಾಜಾಗುತ್ತಿರುವ ಕಾರಣ ಕಂಪೆನಿ ಈ ನಷ್ಟವನ್ನು ಅನುಭವಿಸಿದೆ. ಕೃಷ್ಣ ಗೋದಾವರಿ ಕೊಳ್ಳದಿಂದ ಗುಜರಾತ್‌ಗೆ ಸಂಪರ್ಕ ಕಲ್ಪಿಸುವ 1,400 ಕಿ.ಮೀ ಉದ್ದದ ಗ್ಯಾಸ್‍ಲೈನನ್ನು ಕಂಪೆನಿ ಹೊಂದಿದೆ. 
 
ಕೆಜಿ ಕೊಳ್ಳದಿಂದ ಉತ್ಪತ್ತಿಯಾಗುವ ಗ್ಯಾಸ್ ಮೂಲಕ ಕಂಪೆನಿ ಆದಾಯ ಗಳಿಸುತ್ತಿದೆ. ಆದರೆ 2016ರ ಆರ್ಥಿಕ ವರ್ಷದಲ್ಲಿ ಕಂಪೆನಿ ನಿಖರ ಆದಾಯ ರೂ.2641 ಕೋಟಿ ಋಣಾತ್ಮಕವಾಗಿ ಇದೆ ಎಂದು ರಿಲಯನ್ಸ್ ಗ್ಯಾಸ್ ಫೈಲಿಂಗ್‌ನಲ್ಲಿ ತಿಳಿಸಿದೆ. 2010ರಿಂದ ಕಂಪೆನಿ ಒಮ್ಮೆ ಮಾತ್ರ ಲಾಭ ಗಳಿಸಿರುವುದಾಗಿ ತಿಳಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ