ಟೋಲ್ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಶನಿವಾರ, 5 ಅಕ್ಟೋಬರ್ 2019 (08:09 IST)
ಚೆನ್ನೈ : ಟೋಲ್​ ಬೂತ್​ ನಲ್ಲಿ ಡಿಜಿಟಲ್​ ಪಾವತಿಯನ್ನು ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ.




ಡಿಸೆಂಬರ್​​ 1 ರಿಂದ ತಮಿಳುನಾಡು ಟೋಲ್​ ಬೂತ್​ನಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಇದಕ್ಕಾಗಿ ಫಾಸ್ಟ್​ಟ್ಯಾಗ್​ ಎಂಬ ಹೊಸ ಡಿವೈಸ್​​ ನ್ನು 2014ರಲ್ಲಿಯೇ ಕಂಡುಹಿಡಿಯಲಾಗಿದ್ದು, ವಾಹನದಲ್ಲಿ ಇದನ್ನು ಅಳವಡಿಸುವುದರ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಯಂಚಾಲಿತವಾಗಿ ಟೋಲ್​ ಪಾವತಿ ಮಾಡಬಹುದಾಗಿದೆ.


ಅಲ್ಲದೇ ಈ ಡಿವೈಸ್ ಮೂಲಕ ಟೋಲ್​ ಹಣ ಪಾವತಿಸಿದರೆ ಶೇ. 10 ರಷ್ಟು ಕ್ಯಾಶ್ ​ಬ್ಯಾಕ್​ ಸಿಗಲಿದೆ. ಹಾಗೇ  ಇದರಿಂದ ವೇಗವಾಗಿ ಹಣ ಪಾವತಿ ಮಾಡಬಹುದಾಗಿದ್ದರಿಂದ ಟೋಲ್​ ಬೂತ್ ​ಗಳಲ್ಲಿ ಟ್ರಾಫಿಕ್​ ಜಾಮ್​ ಸಮಸ್ಯೆ ಕಡಿಮೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ