ಬ್ಯಾಂಕ್ ವಹಿವಾಟಿಗೆ ಆಧಾರ್ ಕಾರ್ಡ್ ಬಳಸುವಾಗ ಈ ತಪ್ಪು ಮಾಡದರೆ ದಂಡ ತೆರಬೇಕಾಗುತ್ತದೆ ಹುಷಾರ್
ಮಂಗಳವಾರ, 16 ಜುಲೈ 2019 (09:30 IST)
ಬೆಂಗಳೂರು : ಬ್ಯಾಂಕ್ ವಹಿವಾಟಿಗೆ ಇನ್ಮುಂದೆ ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸಬಹುದು ಎಂಬ ವಿಚಾರ ತಿಳಿದೆ ಇದೆ. ಆದರೆ ಇದೀಗ ಈ ವೇಳೆ ಇಂತಹದೊಂದು ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ ಹುಷಾರ್.
ಹೌದು. ಜುಲೈ 5ರಂದು ಕೇಂದ್ರ ಸರ್ಕಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಇಸಿದ ಬಜೆಟ್ ನಲ್ಲಿ ಬ್ಯಾಂಕ್ ವಹಿವಾಟಿಗೆ ಇನ್ಮುಂದೆ ಪಾನ್ ಅವಶ್ಯಕತೆಯಿಲ್ಲ. ಆಧಾರ್ ಕಾರ್ಡ್ ಮೂಲಕ ವ್ಯವಹಾರ ನಡೆಸಬಹುದು ಎಂದಿದ್ದರು.
ಆದರೆ ಬ್ಯಾಂಕ್ ವಹಿವಾಟಿನ ವೇಳೆ ನೀವು ತಪ್ಪು ಆಧಾರ್ ನಂಬರ್ ನೀಡಿದ್ರೆ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ. ಹಾಗೇ ಹೊಸ ನಿಯಮ ಸೆಪ್ಟೆಂಬರ್ 2019ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.