ಇ-ಕಾಮರ್ಸ್ ಕಂಪೆನಿ ಪೇಟಿಎಂ ಇಂದು ಹೊಸ ಆಪ್ ಬಿಡುಗಡೆ ಮಾಡಿದೆ. ’ಪೇಟಿಎಂ ಮಾಲ್’ ಹೆಸರಿನ ಆಂಡ್ರಾಯ್ಡ್ ಆಪ್ ಬಿಡುಗಡೆ ಮಾಡುತ್ತಿರುವುದಾಗಿ ಕಂಪೆನಿ ತಿಳಿಸಿದೆ. ಈ ಆಪ್ ಮೂಲಕ ಭಾರತೀಯ ಬಳಕೆದಾರರು ಮಾಲ್, ಬಜಾರ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಪೇಟಿಎಂ ತಿಳಿಸಿದೆ.
ಕೇವಲ ನಂಬಿಕೆಯುಳ್ಳ ಮಾರಾಟಗಾರರು, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ತಮ್ಮ ಪೇಟಿಎಂ ಮಾಲ್ ಆಪ್‌ನಲ್ಲಿ ಅನುಮತಿ ನೀಡುತ್ತೇವೆ ಎಂದು ಪೇಟಿಎಂ ಪ್ರಕಟಣೆಯಲ್ಲಿ ತಿಳಿಸಿದೆ. ಬಳಕೆದಾರರ ನಂಬಿಕೆಯನ್ನು ಮತ್ತವರ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ಉತ್ತಮ ಶಿಪ್ಪಿಂಗ್ ಸೇವೆಗಳನ್ನು ನೀಡುವುದಾಗಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಕಂಪೆನಿ ಉಪಾಧ್ಯಕ್ಷ ಸೌರಭ್ ವಶಿಷ್ಟ, ಉತ್ತಮ ಆನ್‌ಲೈನ್ ಶಾಪಿಂಗ್ ಸೇವೆಗಳಿಗಾಗಿ ದೇಶದಾದ್ಯಂತ 17 ಪೇಟಿಎಂ ಮಾಲ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. ಪೇಟಿಎಂ ಮಾಲ್ ಐಓಎಸ್ ಆಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.