ಪೆಟ್ರೋಲ್ ದರದಲ್ಲಿ 2.25 ರೂ, ಡೀಸೆಲ್ ದರದಲ್ಲಿ 42 ಪೈಸೆ ಇಳಿಕೆ

ಶನಿವಾರ, 16 ಜುಲೈ 2016 (16:15 IST)
ತೈಲ ಮಾರುಕಟ್ಟೆ ಕಂಪೆನಿಗಳು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 2.25 ರೂಪಾಯಿ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 42 ಪೈಸೆ ದರ ಇಳಿಕೆ ಮಾಡಿವೆ.
 
ದರ ಇಳಿಕೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 64.76 ರೂಪಾಯಿಗಳಿಂದ 62.51 ರೂಪಾಯಿಗಳಿಗೆ ಕಡಿತಗೊಂಡಿದೆ ಎಂದು ದೇಶದ ಬೃಹತ್ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪ್ರಕಟಣೆಯಲ್ಲಿ ತಿಳಿಸಿದೆ. 
 
ಅದರಂತೆ, ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 54.70 ರೂಪಾಯಿಗಳಿಂದ 54.28 ರೂಪಾಯಿಗಳಿಗೆ ಇಳಿಕೆಯಾಗಿದೆ. 
 
ಕಳೆದ ಜೂನ್ 30 ರಂದು ತೈಲ ಕಂಪೆನಿಗಳು ಪೆಟ್ರೋಲ್ ದರದಲ್ಲಿ 89 ಪೈಸೆ ಮತ್ತು ಡೀಸೆಲ್ ದರದಲ್ಲಿ 49 ಪೈಸೆ ಇಳಿಕೆಗೊಳಿಸಿರುವುದನ್ನು ಸ್ಮರಿಸಬಹುದು. 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ