ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದ ಜನರು!

ಶನಿವಾರ, 1 ಸೆಪ್ಟಂಬರ್ 2018 (20:13 IST)
ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ ತಡ, ಜನರು ನಾ ಮುಂದು ತಾ ಮುಂದು ಎಂದು ಟ್ಯಾಂಕರ್ ಸುತ್ತ ಮುಗಿಬಿದ್ದು ಪೆಟ್ರೊಲ್ ತುಂಬಿಕೊಂಡ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಎಸ್.ಎನ್.ಹಿಪ್ಪರಗಾ ಕ್ರಾಸ್ ಬಳಿ ಪೆಟ್ರೊಲ್ ಟ್ಯಾಂಕರ್ ಪಲ್ಟಿಯಾಗಿದೆ. ಹೀಗಾಗಿ ಜನರು ಮುಗಿಬಿದ್ದು ಪೆಟ್ರೊಲ್ ತುಂಬಿಕೊಂಡರು. ರಾಷ್ಟ್ರೀಯ ಹೆದ್ದಾರಿ 18ರಲ್ಲಿ ಹಿಪ್ಪರಗಾ ಸೇತುವೆ ಬಳಿ ರಿಲಯನ್ಸ್ ಕಂಪನಿಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿಯೇ ಪಲ್ಟಿ ಹೊಡೆದಿದೆ.

ವಿಜಯಪುರದಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಇದಾಗಿತ್ತು. ಸೋರಿ ಹೋಗುತ್ತಿದ್ದ ಪೆಟ್ರೊಲ್ ನನ್ನು ಜನರು ಜೀವದ ಭಯ ಬಿಟ್ಟು ತುಂಬಿಕೊಂಡರು. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ