200 ರೂ ಮುಖಬೆಲೆಯ ನೋಟು ಶೀಘ್ರ ಚಲಾವಣೆಗೆ

ಗುರುವಾರ, 29 ಜೂನ್ 2017 (17:18 IST)
200 ಮುಖಬೆಲೆಯ ನೋಟುಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಈಗಾಗಲೆ ನೋಟು ಮುದ್ರಣಕ್ಕೆ ಆದೇಶವನ್ನು ನೀಡಲಾಗಿದೆ.
 
ಈ ಮೂಲಕ ಮುಂದಿನ ದಿನಗಳಲ್ಲಿ 100 ಮತ್ತು 500 ನೋಟುಗಳ ನಡುವೆ 200 ರೂಪಾಯಿ ನೋಟು ಕೂಡ ಚಲಾವಣೆಗೆ ಬರಲಿದೆ. ಈ ಮೂಲಕ ನಗದು ವ್ಯವಹಾರದಲ್ಲಿ ತಲೆದೋರಿರುವ ಸಮಸ್ಯೆ ನಿವಾರಣೆಯಾಗಲಿದೆ. 200 ರೂ. ನೋಟು ಬಿಡುಗಡೆಯಿಂದ ದಿನನಿತ್ಯದ ವ್ಯವಹಾರಗಳು ಇನ್ನೂ ಸುಗಮವಾಗಲಿದೆ' ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ತಜ್ಞ ಕಾಂತಿ ಘೋಷ್‌ ಹೇಳಿದ್ದಾರೆ. ಅಪನಗದೀಕರಣ ಬಳಿಕ ಕೇಂದ್ರ ಸರ್ಕಾರ 200 ರೂ. ನೋಟು ಹೊರತರುವ ತೀರ್ಮಾನ ಮಾಡಿತ್ತು. ಈ ಪ್ರಸ್ತಾವನೆಯನ್ನು ರಿಸರ್ವ್‌ ಬ್ಯಾಂಕ್‌ ಅನುಮೋದಿಸಿತ್ತು. 2000
ರೂ. ಮತ್ತು 500 ರೂ. ಹೊಸ ನೋಟುಗಳ ನಡುವಿನ ಅಂತರವನ್ನು 200ರ ನೋಟು ತುಂಬಲಿದೆ ಎಂದು ಘೋಷ್‌ ಹೇಳಿದ್ದಾರೆ.
 
ಇನ್ನು ಈ ನೋಟು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳನ್ನು ಹೊಂದಿರಲಿದೆ. ಸದ್ಯ ಇದರ ಗುಣಮಟ್ಟ ಮತ್ತು ಭದ್ರತೆಗಳ ಕುರಿತ ಪರೀಕ್ಷೆ  ಮಧ್ಯಪ್ರದೇಶದ ಹೊಸಂಗಾಬಾದ್‌ನ ಸರ್ಕಾರಿ ಮುದ್ರಣಾಲಯದಲ್ಲಿ ನಡೆಸಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ