ಕಾರ್ಮಿಕರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಸಿಎಂ, ಡಿಸಿಎಂ ದೆಹಲಿ ಭೇಟಿ ಸಾಮಾನ್ಯ. ಅದರಲ್ಲಿ ವಿಶೇಷವಾಗಿರುವುದು ಏನೂ ಇಲ್ಲ ಎಂದರು.
ಬಳಿಕ ಮಾಧ್ಯಮಗಳು ಕಾರ್ಮಿಕ ಕಾರ್ಡ್ ಇದ್ದರೂ ಕೆಲವು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ಸಚಿವರ ಗಮನ ಸೆಳೆದಿದ್ದಾರೆ. ಇದಕ್ಕೆ ಶಾಕ್ ಆದ ಅವರು ಹೌದಾ ಬರುತ್ತಿಲ್ವಾ? ನಾನು ಖಂಡಿತಾ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬಳಿ ಮಾತನಾಡುತ್ತೇನೆ ಎಂದಿದ್ದಾರೆ.
ಈ ರೀತಿ ಯಾವುದೇ ನಿಯಮಗಳು ನಮ್ಮಲ್ಲಿಲ್ಲ. ನಾನು ಸಚಿವರ ಜೊತೆ ಮಾತನಾಡಿ ಏನು ಸಮಸ್ಯೆಯಾಗಿದೆಯೋ ಅದನ್ನು ಸರಿಪಡಿಸುತ್ತೇನೆ. ಕಾರ್ಮಿಕ ಕಾರ್ಡ್ ಇರುವವರು ಬಿಪಿಎಲ್ ಕಾರ್ಡ್ ದಾರರೇ ಆಗಿರ್ತಾರೆ. ಅವರಿಗೆ ಗೃಹಲಕ್ಷ್ಮಿ ಸಿಗಬೇಕು. ಅದನ್ನು ನಾನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.