ಪ್ರಕಾಶ್ ರೈಗೆ ಬೇರೆ ರಾಜ್ಯದ ಅನ್ಯಾಯ ಕಾಣಲ್ವಾ: ಸಚಿವ ಎಂಬಿ ಪಾಟೀಲ್

Krishnaveni K

ಮಂಗಳವಾರ, 8 ಜುಲೈ 2025 (16:37 IST)
ಬೆಂಗಳೂರು: ರೈತರ ಭೂಸ್ವಾದೀನ ವಿರುದ್ಧ ಹೋರಾಟಕ್ಕಿಳಿದಿರುವ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಸಚಿವ ಎಂಬಿ ಪಾಟೀಲ್ ಗುಡುಗಿದ್ದಾರೆ. ಬಹುಭಾಷಾ ನಟನಲ್ವಾ? ಹಾಗಿದ್ದರೆ ಬೇರೆ ರಾಜ್ಯದಲ್ಲಿ ನಡೆಯುತ್ತಿರುವ ಭೂ ಸ್ವಾದೀನ ಕಾಣಲ್ವಾ ಎಂದಿದ್ದಾರೆ.

ದೇವಹಳ್ಳಿ ಕೃಷಿ ಭೂಮಿ ಸ್ವಾದೀನಕ್ಕೆ ನಟ ಪ್ರಕಾಶ್ ರೈ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರೈತರ ಜೊತೆ ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಕಾಮೆಂಟ್ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದೀಗ ನಟನ ಬಗ್ಗೆ ಸಚಿವ ಎಂಬಿ ಪಾಟೀಲ್ ಕಿಡಿ ಕಾರಿದ್ದಾರೆ. ನಮ್ಮಲ್ಲಿ ಹೈಟೆಕ್ ಏರ್ ಡಿಫೆನ್ಸ್ ಮತ್ತು ಏರ್ ಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಭೂಮಿ ಸ್ವಾದೀನ ಮಾಡಲು ಹೊರಟಿದ್ದೇವೆ. ಆದರೆ ಪಕ್ಕದ ಆಂಧ್ರದಲ್ಲಿ 10 ಸಾವಿರ ಎಕರೆ ಭೂಸ್ವಾದೀನ ನಡೆದಿದೆ. ಪ್ರಕಾಶ್ ರೈ ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಜನಪ್ರಿಯ ನಟ. ಹಾಗಿದ್ದರೆ ಅಲ್ಲಿ ಹೋಗಿ ಪ್ರತಿಭಟನೆ ಮಾಡಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಪಕ್ಕದ ತಮಿಳುನಾಡಿನಲ್ಲೂ ಕೈಗಾರಿಕಾ ಉದ್ದೇಶಕ್ಕೆ ಅಲ್ಲಿನ ಸರ್ಕಾರ ಕಡಿಮೆ ಬೆಲೆಗೆ ಭೂಮಿ ಕೊಡುತ್ತಿದೆ. ನಮ್ಮ ಹೊಸೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿ ಜಾಗ ನೀಡಲಾಗುತ್ತಿದೆ. ಹಾಗಿದ್ದರೆ ಇದೆಲ್ಲಾ ಪ್ರಕಾಶ್ ರೈಗೆ ಕಾಣಲ್ವಾ ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ