ಕೈಗೆಟಕುವ ದರದಲ್ಲಿ ಮನೆಗಳು ಸಿಗುವಂತೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯ. ಮೊದಲು ನಿರ್ಮಿತ ಪ್ರದೇಶಗಳಿಗೆ ಮಾತ್ರ ಸಾಲ ನೀಡಲಾಗುತ್ತಿತ್ತು. ಆದರೆ,ಈಗ ಮೆಟ್ರೋ ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಬಳಕೆಯ ಪ್ರದೇಶಕ್ಕೂ ಸಾಲ ಸೌಲಭ್ಯವಾಗಲಿದೆ.
ಅಲ್ಲದೆ, ಇಎಂಐ ಪಾವತಿಯೂ ಸುಲಭವಾಗಲಿದೆ. 2016ನೇ ಸಾಲಿನ ವೇಳೆಗೆ ಬಡವರಿಗಾಗಿ 1 ಕೋಟಿ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 23 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಬಡವರಿಗೆ ಕಡಿಮೆ ದರದಲ್ಲಿ ಮನೆಗಳು ಲಭ್ಯವಾಗಲಿದ್ದು, ಡೆವಲಪರ್ಸ್‍ಗಳಿಗೂ ಪ್ರಯೋಜನವಾಗಲಿದೆ ಎಂದರು.